ಲಾಂಗ್ ಡ್ರೈವ್ ನೆಪದಲ್ಲಿ ಬೆಂಗಳೂರಿಗೆ ಬರುತ್ತಿದ್ದ ಲೇಡಿ ಗ್ಯಾಂಗ್ ಮಾಡಿದ್ದೇನು ಗೊತ್ತಾ?

ಲಾಂಗ್ ಡ್ರೈವ್ ನೆಪದಲ್ಲಿ ಅಂಗಡಿಗಳನ್ನು ದೋಷಿ ಮೋಜು ಮಸ್ತಿ ಮಾಡುತ್ತಿದ್ದ ಲೇಡ್ ಗ್ಯಾಂಗ್ ಅನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಲಾಂಗ್ ಡ್ರೈವ್ ನೆಪದಲ್ಲಿ ಅಂಗಡಿಗಳನ್ನು ದೋಷಿ ಮೋಜು ಮಸ್ತಿ ಮಾಡುತ್ತಿದ್ದ ಲೇಡ್ ಗ್ಯಾಂಗ್ ಅನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಶೋಕಿಗಾಗಿ ಕಳ್ಳತನಕ್ಕಿಳಿದಿದ್ದ ತೆಲಂಗಾಣ ಪ್ರಕಾಶಂ ಜಿಲ್ಲೆಯ ಸುಮಲತಾ (24), ಅಂಕಮ್ಮ (30), ರಮ್ಯಾ(19) ಮತ್ತು ಇಸ್ಮಾಯಿಲ್ (19) ಬಂಧಿತ ಆರೋಪಿಗಳು.

ಶೋಕಿಗಾಗಿ ಕಳ್ಳತನಕ್ಕಿಳಿದಿದ್ದ ಲೇಡ್ ಗ್ಯಾಂಗ್ ಲಾಂಗ್ ಡ್ರೈವ್ ಹೊರಟು ಸಿಕ್ಕಿ ಸಿಕ್ಕ ಅಂಗಡಿಗಳಲ್ಲಿ ದೋಚುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 7ರ ಅಮಾನಿಕೆರೆ ಬಳಿ ಲಾಂಗ್ ಡ್ರೈವ್ ಗೆ ಬಂದಿದ್ದ ಗ್ಯಾಂಗ್ ಕೈ ಚಳಕ ತೋರಿಸಲು ಮುಂದಾದಾಗ ದೇವನಹಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಅಂದಹಾಗೆ ಬಂಧಿತ ಆರೋಪಿಗಳಲ್ಲಿ ಸುಮಲತಾ ಹಾಗೂ ರಮ್ಯ ಇಬ್ಬರು ಸ್ನೇಹಿತೆಯರಾಗಿದ್ದ, ಶೋಕಿಗಾಗಿ ಹೊಸ ಕಾರು ಖರೀದಿಸಿದ್ದರು. ಹೈದರಾಬಾದ್ ನಿಂದ ಬೆಂಗಳೂರು ಕಡೆ ಲಾಂಗ್ ಡ್ರೈವ್ ಬಂದಿದ್ದ ಈ ಲೇಡಿ ಗ್ಯಾಂಗ್ ಕಳ್ಳತನ ನಡೆಸುತ್ತಿತ್ತು.

ಬೆಳಗ್ಗಿನ ಜಾವ ಹೆದ್ದಾರಿಯಲ್ಲಿ ಅಂಗಡಿಯಲ್ಲಿ ಕನ್ನ ಹಾಕುವ ವೇಳೆ ಸಿಕ್ಕಿಬಿದ್ದ ಕಳ್ಳಿಯರಿಂದ ವ್ಯಾಗ್ನಾರ್ ಕಾರು, ಕಳ್ಳತನಕ್ಕೆ ‌ಬಳಸುತ್ತಿದ್ದ ರಾಡ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!