ವಿಧಾನಸಭೆ ಚುನಾವಣೆ (VIDHANASABHA ELECTION) ಯೊಳಗೆ ಕಾಡುಗೊಲ್ಲ ಸಮುದಾಯ (KADUGOLLA COMMUNITY) ಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ಘೋಷಣೆ ಮಾಡದಿದ್ದರೆ 2023ರ ವಿಧಾನಸಭಾ ಚುನಾವಣೆಯನ್ನು ಕಾಡುಗೊಲ್ಲ ಸಮುದಾಯವು ಬಹಿಷ್ಕರಿಸಲಿದೆ ಎಂದು ಸಮುದಾಯದವರು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ಕಾಡುಗೊಲ್ಲ ಸಮುದಾಯವು ಬೃಹತ್ ಪ್ರತಿಭಟನೆ (PROTEST) ಹಮ್ಮಿಕೊಂಡು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು. ಗೊಲ್ಲ ಸಮುದಾಯದ ಹಾಸ್ಟೆಲ್ನಲ್ಲಿ ಬುಡಕಟ್ಟು ಸಮುದಾಯದಂತೆ ವಿಶೇಷ ಪೂಜೆ ಸಲ್ಲಿಸಿ, ನಗರದ ಪ್ರಮುಖ ಬೀದಿಗಳಲ್ಲಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಸಾಗಿತು. ನಂತರ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಇದನ್ನು ಓದಿ :- AK ಆಂಟನಿ ಪುತ್ರ ಅನಿಲ್ ಆಂಟನಿ ಕಾಂಗ್ರೆಸ್ ಗೆ ರಾಜೀನಾಮೆ- ಮೋದಿ ಬೆಂಬಲಿಸಿದ ಮರುದಿನವೇ ರಿಸೈನ್
ಪ್ರತಿಭಟನೆ ಕುರಿತು ಮಾತನಾಡಿದ ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ (RAJANNA) ಬುಡಕಟ್ಟು ಸಂಸ್ಕೃತಿಯನ್ನು ಹೊಂದಿರುವ ಕಾಡುಗೊಲ್ಲ ಸಮುದಾಯವರನ್ನು ಎಸ್ಟಿ (ST) ಪಂಗಡಕ್ಕೆ ಸೇರಿಸಬೇಕು. ನಾವು ದಶಕಗಳಿಂದ ಹೋರಾಟ ನಡೆಸುತ್ತಾ ಬಂದಿದ್ದೇವೆ. ಸರ್ಕಾರಗಳು ನಮ್ಮನ್ನು ಮತಕ್ಕಾಗಿ ಬಳೆಸಿಕೊಳ್ಳುತ್ತೀವೆ, ಆದರೆ ನಮಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ತಿಳಿಸಿದರು. ಮಾಜಿ ಸಿಎಂ ಯಡಿಯೂರಪ್ಪ (YEDIYURAPPA) ಅವಧಿಯಲ್ಲಿ ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಾಡಿದರೂ ನಿಗಮಕ್ಕೆ ಅಧ್ಯಕ್ಷರ ನೇಮಕ ಮಾಡಿಲ್ಲ. ಬುಡಕಟ್ಟು ಸಮುದಾಯವಾದ ನಮಗೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಚುನಾವಣೆ ಒಳಗೆ ಎಸ್ಟಿ ಜಾತಿಗೆ ಸೇರಿಸಿದ್ದರೆ ಹಟ್ಟಿಗಳಲ್ಲಿ ನಾಮ ಫಲಕ ಹಾಕಿ, ಜಾಗೃತಿ ಮೂಡಿಸುವ ಮೂಲಕ ಚುನಾವಣೆ ಬಹಿಷ್ಕರಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇದನ್ನು ಓದಿ :- ಸಿದ್ದರಾಮಯ್ಯ ಕೋಲಾರದಿಂದ ನಿಂತು ಗೆಲ್ಲುವುದು ಕಷ್ಟ ..! ಸುಧಾಕರ್