ದೇಶದಲ್ಲಿ ಪ್ರಬಲ ವಿರೋಧ ಪಕ್ಷ ಇರಬೇಕು ಎಂಬುದಷ್ಟೇ ನನ್ನ ಅಭಿಲಾಷೆ- ಪ್ರಧಾನಿ ಮೋದಿ!

ವಂಶಾಡಳಿತ ವ್ಯವಸ್ಥೆ ಹೊಂದಿರುವ ರಾಜಕೀಯ ಪಕ್ಷಗಳು ಸದಾ ನನ್ನ ವಿರುದ್ಧ ಕತ್ತಿ ಮಸೆಯುತ್ತಿರುತ್ತವೆ. ಆದರೆ ನನಗೆ ಯಾರೊಂದಿಗೂ ವೈಯಕ್ತಿಕ ದ್ವೇಷವಿಲ್ಲ.

ಉತ್ತರ ಪ್ರದೇಶದ (Uttar pradesh ) ಕಾನ್ಪುರ್ (Kanpur) ದೇಹಟ್ನಲ್ಲಿ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ (Narendra modi) , ದೇಶದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಬಲ ವಿಪಕ್ಷ ಇರಬೇಕು ಎಂಬುದಷ್ಟೇ ನನ್ನ ಅಭಿಲಾಷೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸ್ವಜನಪಕ್ಷಪಾತದಲ್ಲಿ ಸಿಲುಕಿರುವ ವಿಪಕ್ಷಗಳು, ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗೊತ್ತಿ ದೇಶದ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.ನನ್ನನ್ನು ಕಂಡರೆ ವಿಪಕ್ಷಗಳಿಗೆ ಇನ್ನಿಲ್ಲದ ಕೋಪ. ಆದರೆ ನನ್ನ ಮೇಲಿನ ಕೋಪ ಈ ದೇಶವನ್ನು ದುರ್ಬಲಗೊಳಿಸುವಂತಾಗಬಾರದು. ನನಗೆ ವೈಯಕ್ತಿಕವಾಗಿ ಯಾರ ಮೇಲೂ ದ್ವೇಷವಿಲ್ಲ. ಪ್ರಬಲ ವಿಪಕ್ಷ ಪ್ರಜಾತಂತ್ರ ವ್ಯವಸ್ಥೆಗೆ ಉತ್ತಮ ಎಂಬುದಷ್ಟೇ ನನ್ನ ಅಭಿಪ್ರಾಯ ಎಂದು ಪ್ರಧಾನಿ ಮೋದಿ ಹೇಳಿದರು.ದೇಶದ ಗ್ರಾಮೀಣ ಪ್ರದೇಶದ, ಕಡುಬಡತನದ ಕುಟುಂಬದಿಂದ ಬಂದ ವ್ಯಕ್ತಿ ಕೂಡ ರಾಷ್ಟ್ರಪತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿ, ರಾಜ್ಯಪಾಲ ಮುಂತಾದ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು ಎಂಬಂತಹ ಸನ್ನಿವೇಶ ಈಗ ಸೃಷ್ಟಿಯಾಗಿದೆ. ಆದರೆ ಅಧಿಕಾರ ತಮ್ಮ ಬಳಿಯೇ ಇರಬೇಕು ಎಂದು ಬಯಸುವ ಪರಿವಾರವಾದ ಪರ ರಾಜಕಾರಣಿಗಳಿಗೆ ಇದನ್ನು ಸಹಿಸಲು ಆಗುತ್ತಿಲ್ಲ. ಆದರೆ ದೇಶ ಈ ಬದಲಾವಣೆಯನ್ನು ಒಪ್ಪಿಕೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇದನ್ನೂ ಓದಿ : – ಜೂನ್ 10ರಂದು ರಾಜ್ಯಸಭಾ ಚುನಾವಣೆಗೆ ಮತದಾನ – ಚುನಾವಣಾಧಿಕಾರಿ M.K. ವಿಶಾಲಕ್ಷಿ ಸ್ಪಷ್ಟನೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!