ಮೊಟ್ಟೆ ದೋಸೆ ಮಾಡಲು ಬೇಕಾಗುವ ಪದಾರ್ಥಗಳು
ಕೋಳಿ ಮೊಟ್ಟೆ- 3 ಹಸಿಮೆಣಸಿನ ಕಾಯಿ – 4, ಈರುಳ್ಳಿ- 1 ಕೊತ್ತಂಬರಿ ಸೊಪ್ಪು ಸ್ವಲ್ಪ, ಕಾಳುಮೆಣಸಿನ ಪುಡಿ – ಸ್ವಲ್ಪ ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು, ರುಚಿಗೆ ತಕ್ಕಷ್ಟು ಉಪ್ಪು ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಗೂ ಹಸಿಮೆಣಸಿನ ಕಾಯಿಯನ್ನು ಸಣ್ಣಗೆ ಕತ್ತರಿಸಿಟ್ಟುಕೊಳ್ಳಿ.
ಒಂದು ಬಾಣಲೆಗೆ 2-3 ಚಮಚ ಎಣ್ಣೆ ಹಾಕಿ, ಈರುಳ್ಳಿ ಹಾಗೂ ಹಸಿಮೆಣಸಿನ ಕಾಯಿಯನ್ನು ಕೆಂಪಗೆ ಹುರಿದುಕೊಳ್ಳಿ. ನಂತರ ಇದಕ್ಕೆ ಕೊತ್ತಂಬರಿ ಸೊಪ್ಪು, ಉಪ್ಪು, ಕಾಳು ಮೆಣಸಿನ ಪುಡಿ ಸೇರಿಸಿ ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಮೊಟ್ಟೆ ಒಡೆದು ಇದಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಒಲೆಯ ಮೇಲೆ ತವಾ ಇಟ್ಟು ಒಂದು ಚಮಚ ಎಣ್ಣೆಯನ್ನು ಹಾಕಿ ಮಸಾಲೆ ಮಿಶ್ರಿತ ಮೊಟ್ಟೆ ಹಾಕಿ ಎರಡೂ ಬದಿಯಲ್ಲೂ ಕೆಂಪಗೆ ಸುಟ್ಟರೆ ರುಚಿಕರವಾದ ಮೊಟ್ಟೆ ದೋಸೆ ಸವಿಯಲು ಸಿದ್ಧ. ಮಕ್ಕಳಂತೂ ಬಾಯಿ ಚಪ್ಪರಿಸಿಕೊಂಡು ಮೊಟ್ಟೆ ದೋಸೆ ತಿನ್ತಾರೆ. ಇದನ್ನೂ ಓದಿ- ಬೀಗರ ಊಟದ ಸ್ಪೆಷಲ್ ಬೋಟಿ ಗೊಜ್ಜು ಮಾಡೋದು ಹೇಗೆ ಗೊತ್ತಾ..?