ಫಿನಿಕ್ಸ್ನಂತೆ ಎದ್ದು ಬಂದಿರುವ ನೀರಜ್ ಚೋಪ್ರಾ (Neeraj chopra) ಇತಿಹಾಸ ನಿರ್ಮಿಸಿದ್ದಾರೆ. ಲಾಸನ್ನಲ್ಲಿ ನಡೆದ ಡೈಮಂಡ್ ಲೀಗ್ (Diamond league) ನಲ್ಲಿ ಅಗ್ರಸ್ಥಾನ ಪಡೆದು ಕೊಂಡಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್ ಎಂಬ ದಾಖಲೆ ಬರೆದಿದ್ದಾರೆ.
ಒಲಿಂಪಿಕ್ಸ್ (Olampics) ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಜಾವೆಲಿನ್ ಥ್ರೋ (Javelin throw) ಸ್ಪರ್ಧಿ ನೀರಜ್ ಚೋಪ್ರಾ ಲಾಸನ್ನಲ್ಲಿ ನಡೆದ ಡೈಮಂಡ್ ಲೀಗ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಈ ವಿಶಿಷ್ಟ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್ (Athletic) ಎಂಬ ಗೌರವಕ್ಕೆ ನೀರಜ್ ಪಾತ್ರರಾಗಿದ್ದಾರೆ. ಈ ಜಯದೊಂದಿಗೆ ಮುಂದಿನ ತಿಂಗಳು ಜ್ಯೂರಿಚ್ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಫೈನಲ್ಗೆ ನೀರಜ್ ಅರ್ಹತೆ ಪಡೆದಿದ್ದಾರೆ. ಮೊದಲ ಪ್ರಯತ್ನದಲ್ಲೇ ನೀರಜ್ ಈ ಸಾಧನೆ ಮಾಡಿದ್ದು ವಿಶೇಷವಾಗಿದೆ. ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಗೆದ್ದ ಬಳಿಕ ಇವರು ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಕಾಮನ್ವೆಲ್ತ್ ಗೇಮ್ಸ್ನಿಂದ ಕೂಡ ಹೊರಗುಳಿಯ ಬೇಕಾಯಿತು. ಇದೀಗ ಸ್ವಿಸ್ನ ಡೈಮಂಡ್ ಲೀಗ್ನಲ್ಲಿ 89.08 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಪ್ರಶಸ್ತಿ ಜಯಿಸಿಕೊಂಡಿದ್ದಾರೆ. ಇದನ್ನೂ ಓದಿ : – ಏಷ್ಯಾ ಕಪ್ 2022- ಟೀಮ್ ಇಂಡಿಯಾ ಮಧ್ಯಂತರ ಮುಖ್ಯ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ನೇಮಕ
ಈ ಗೆಲುವಿನೊಂದಿಗೆ ನೀರಜ್ ಚೋಪ್ರಾ ಸೆಪ್ಟೆಂಬರ್ 7 ಮತ್ತು 8 ರಂದು ಸ್ವಿಟ್ಜರ್ಲೆಂಡ್ (Swizter land) ನ ಜ್ಯೂರಿಚ್ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಫೈನಲ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, 2023 ರ ವಿಶ್ವ ಚಾಂಪಿಯನ್ಶಿಪ್ಗೆ ನೀರಜ್ ಅರ್ಹತೆ ಪಡೆದಿದ್ದಾರೆ.
ಇದನ್ನೂ ಓದಿ : – ನಾಳೆಯಿಂದ ಏಷ್ಯಾಕಪ್ 2022 ಕ್ರಿಕೆಟ್ ಟೂರ್ನಿ- ಭಾನುವಾರ ಭಾರತ ಪಾಕಿಸ್ತಾನ ಹಣಾಹಣಿ