ಸ್ಯಾಂಟ್ರೋ ರವಿ (Santro ravi) ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿ (Mysore) ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣವನ್ನ ಮುಚ್ಚಿ ಹಾಕುವ ಯತ್ನ ನಡೆದಿದೆ. ಸ್ಯಾಂಟ್ರೋ ರವಿ ಒಬ್ಬ ಪಿಂಪ್. ವೇಶ್ಯಾವಾಟಿಕೆ, ವರ್ಗಾವಣೆ ದಂಧೆ, ಪೋಕ್ಸೋ ಪ್ರಕರಣದ ಆರೋಪಿ.
ಆತ ಹೊರಗೆ ಬಂದರೆ ಹಲವರ ಬಂಡವಾಳ ಹೊರಗೆ ಬರುತ್ತೆ. ಆ ಕಾರಣದಿಂದ ಮುಚ್ಚಿ ಹಾಕುವ ಯತ್ನ ನಡೆದಿದೆ. ಸಿಐಡಿಗೆ ಪ್ರಕರಣವನ್ನ ವಹಿಸಿದ್ದು ಏಕೆ. ಆತನನ್ನ ಆರಂಭದಲ್ಲಿ ವಶಕ್ಕೆ ಪಡೆಯದೆ ಇರುವುದು ಏಕೆ? ಆತನನ್ನ ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದು ಏಕೆ ಎಂದು ಪ್ರಶ್ನಿಸಿದ್ರು. ಸಿಐಡಿ (CID) ಕೂಡ ರಾಜ್ಯ ಪೊಲೀಸ್ ಒಂದು ಘಟಕ. ಇದೆಲ್ಲದರ ಹಿಂದೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆದಿದೆ ಎಂದು ಕಿಡಿ ಕಾರಿದ್ರು.
ಇದೇ ವೇಳೆ ಮುಂದಿನ ಚುನಾವಣೆಯಲ್ಲಿ ನಾವು 130 ರಿಂದ150 ಸ್ಥಾನ ಗೆಲ್ಲುತ್ತೇವೆ. ರಾಜ್ಯದ ಜನ ಕಾಂಗ್ರೆಸ್ ಅಧಿಕಾರದಲ್ಲಿ ಆಗ ಕೇಸ್ ಗಳ ಬಗ್ಗೆ ತಿಳಿದುಕೊಂಡಿದ್ದಾರೆ. ನಾವು ಹಿಂದೆ ಪ್ರಣಾಳಿಕೆಯಲ್ಲಿ ಹೇಳಿದ್ದ ಶೇಕಡ 99 ರಷ್ಟು ಕೆಲಸ ಮಾಡಿದ್ದೇವೆ. ಈಗಲೂ 200 ಯುನಿಟ್ ಉಚಿತ ವಿದ್ಯುತ್ (Electricity) , ಕುಟುಂಬ ಮುಖ್ಯಸ್ಥೆಗೆ ತಿಂಗಳು 2000 ಸಾವಿರ ಹಣ ನೀಡುವುದಾಗಿ ಘೊಷಣೆ ಮಾಡಿದ್ದೇವೆ. ಇನ್ನೂ ಹಲವು ಘೋಷಣೆ ಮಾಡಲಿದ್ದೇವೆ. ಇವುಗಳು ಚುನಾವಣೆಯಲ್ಲಿ ನಮ್ಮ ಕೈ ಹಿಡಿಯುತ್ತವೆ. ಯಾರು ಏನೇ ಹೇಳಿದರೂ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಸತ್ಯ ಎಂದು ಹೇಳಿದರು. ಇದನ್ನು ಓದಿ :- ಬೆಂಗಳೂರಿನಲ್ಲಿ ನಾಲ್ಕನೇ ದಿನಕ್ಕೆ ಕಾಲಿಟ್ಟ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
ಇದೇ ವೇಳೆ ಜೆ.ಪಿ.ನಡ್ಡಾ (Jp. nadda) ಗೂ ಕರ್ನಾಟಕಕ್ಕೂ ಏನು ಸಂಬಂಧ ? ಡಬಲ್ ಇಂಜಿನ್ ಸರ್ಕಾರ ಇದ್ದರೂ ಪ್ರಧಾನಿ ಮೋದಿ (Modi) ಏನು ಮಾಡಿದರು ಎಂದು ಪ್ರಶ್ನಿಸಿದ್ರು. ಬರೀ ಸುಳ್ಳು ಹೇಳುತ್ತಾರೆ. ಜನರಿಗೆ ಅವರು ನೀಡಿದ್ದ ಭರವಸೆ ಈಡೇರಿಸಿಲ್ಲ. ಮೋದಿಯಾದರೂ ಬರಲಿ, ನಡ್ಡಾ ಆದರೂ ಬರಲಿ. ಜನ ಅವರ ಮಾತಿಗೆ ಬೆಲೆ ಕೊಡಲ್ಲ. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಈಗಲೂ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್, ಗೃಹಿಣಿಗೆ 2000 ರೂ. ನೀಡುವುದಾಗಿ ಹೇಳಿದ್ದೇವೆ. ಅಧಿಕಾರಕ್ಕೆ ಬಂದರೆ ಈಡೇರಿಸುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಇದನ್ನು ಓದಿ :- ಕಟೀಲ್ ನಾಲಿಗೆಗೆ ಮೂಳೆಯಿಲ್ಲ, ಬಾಯಿಗೆ ಬಂದಂತೆ ಮಾತನಾಡ್ತಾರೆ – ಡಿ . ಕೆ ಶಿವಕುಮಾರ್