ಬಹುನಿರೀಕ್ಷೆಯ ರಾಜ್ಯಸಭೆ ಚುನಾವಣೆಗೆ ರಾಜ್ಯದಿಂದ ನಾಲ್ಕು ಸ್ಥಾನಗಳಿಗೆ ಆರು ಮಂದಿ ಕಣದಲ್ಲಿ ಇದ್ದಾರೆ. ಹೀಗಾಗಿ ಮತ ಲೆಕ್ಕಾಚಾರ ಕುತೂಹಲ ಕೆರಳಿಸಿದೆ.
ನಮ್ಮ ರಾಜ್ಯದ ಮತ ಲೆಕ್ಕಾಚಾರ ಗಮನಿಸಿದಾಗ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ಗಳಿಗೆ ಈಗಿರುವ ಸಂಖ್ಯಾಬಲ ಹಾಗೂ ಅಭ್ಯರ್ಥಿಗಳಿಗೆ ಮಾಡಲಾಗುವ ಮತ ಹಂಚಿಕೆ ಆಧಾರದಲ್ಲಿ ಬಿಜೆಪಿಯ ನಿರ್ಮಲಾ ಸೀತಾರಾಮನ್, ಜಗ್ಗೇಶ್ ಹಾಗೂ ಕಾಂಗ್ರೆಸ್ನ ಜೈರಾಮ್ ರಮೇಶ್ ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದು ಮೊದಲ ಸುತ್ತಿನಲ್ಲೇ ಅನಾಯಾಸವಾಗಿ ಗೆಲುವು ಸಾಧಿಸುತ್ತಾರೆ. ನಿರ್ಮಲಾ ಸೀತಾರಾಮನ್ ಗೆ 46 ಮೊದಲ ಪ್ರಾಶಸ್ತ್ಯದ ಮತ ಚಲಾವಣೆಯಾಗಿದೆ. ಇದನ್ನೂ ಓದಿ : – RS ELECTION – ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ತಾರೆ – ಸಚಿವ ಆರ್. ಅಶೋಕ್, ಜಗದೀಶ್ ಶೆಟ್ಟರ್ ವಿಶ್ವಾಸ
ಮೊದಲ ಸುತ್ತಿನಲ್ಲಿ ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದ ಅಭ್ಯರ್ಥಿಗಳನ್ನು ಚುನಾಯಿತ ಎಂದು ಘೋಷಿಸಿದ ಬಳಿಕ ಮತ್ತು ಮೊದಲ ಸುತ್ತಿನಲ್ಲಿ ಅತಿ ಕಡಿಮೆ ಮತ ಪಡೆದ ಅಭ್ಯರ್ಥಿಯನ್ನು ಕಣದಿಂದ ಕೈಬಿಡುವ ಪ್ರಕ್ರಿಯೆ ನಂತರ 2ನೇ ಪ್ರಾಶಸ್ತ್ಯದ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಕಣದಿಂದ ಕೈಬಿಡಲಾದ ಅಭ್ಯರ್ಥಿಗಳಿಗೆ ಬಿದ್ದಿರುವ ಮತಗಳು ಆತನಿಗಿಂತ ಹೆಚ್ಚು ಮತಗಳನ್ನು ಪಡೆದಿದ್ದ ಅಭ್ಯರ್ಥಿಗೆ ವರ್ಗಾಯಿಸಲಾಗುತ್ತದೆ.
ಈ ರೀತಿ ಎರಡನೇ ಪ್ರಾಶಸ್ತ್ಯದ ಮತಗಳ ಪ್ರಕ್ರಿಯೆ ನಡೆದು ನಾಲ್ಕನೇ ಅಭ್ಯರ್ಥಿಯ ಭವಿಷ್ಯ ನಿರ್ಧಾರವಾಗಲಿದೆ. ಅಡ್ಡ ಮತದಾನ ನಡೆದರೆ, ಶಾಸಕರು ಮತದಾನಕ್ಕೆ ಗೈರು ಹಾಜರಾದರೆ, ಲೆಕ್ಕಾಚಾರದಲ್ಲಿ ಏರುಪೇರು ಆಗುವ ಸಾಧ್ಯತೆಗಳಿರುತ್ತವೆ.
ಇದನ್ನೂ ಓದಿ : – ಡಿಕೆಶಿಗೆ ಮತ ತೋರಿಸಿದ ರೇವಣ್ಣ – ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ