ರಾಜ್ಯಸಭೆ ಚುನಾವಣೆ (Rajyasabha election) ರಂಗೇರಿದೆ. ಜೆಡಿ ಎಸ್ ರೆಬೆಲ್ ಶಾಸಕ ಶ್ರೀನಿವಾಸ್ ಗೌಡ (Srinivas gowda) ಮೊದಲ ಅಡ್ಡ ಮತದಾನ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ ಶ್ರೀನಿವಾಸ್ ಗೌಡ ಕುಮಾರಸ್ವಾಮಿಗೆ (Kumarswamy) ಸೆಡ್ಡು ಹೊಡೆದಿದ್ದಾರೆ.
![](https://rajnewskannada.in/wp-content/uploads/2022/06/WhatsApp-Image-2022-06-10-at-12.42.47-PM1-1024x768.jpeg)
ಬಳಿಕ ಮಾತನಾಡಿದ ಜೆಡಿಎಸ್ ರೆಬೆಲ್ ಶಾಸಕ ಶ್ರೀನಿವಾಸ್ ಗೌಡ ನಾನು ಕಾಂಗ್ರೆಸ್ ಗೆ ಮತ ಹಾಕಿದ್ದೇನೆ. ನಾನು ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಮಂತ್ರಿಯಾಗಿದ್ದೆ ಎಂದು ಹೇಳಿದ್ದಾರೆ. ಹೆಚ್ ಡಿ ಕೆ ನಿಮ್ಮ ವಿರುದ್ಧ ಗರಂ ಆಗಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀನಿವಾಸ್ ಗೌಡ ಸಿಟ್ಟಾದ್ರೆ ಆಗಲಿ ಬಿಡಿ. ರಾಜಕೀಯದಲ್ಲಿ ಇದೆಲ್ಲವೂ ಕಾಮನ್.ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದೇನೆ ಎಂದು ಹೇಳಿದ್ರು.
ಇದನ್ನೂ ಓದಿ : – RS ELECTION – ನಿರ್ಮಲಾ ಸೀತಾರಾಮನ್ ಗೆ 46 ಪ್ರಥಮ ಪ್ರಾಶಸ್ತ್ಯದ ಮತ ಚಲಾವಣೆ