ಆರ್ ಎಸ್ ಎಸ್ (RSS ) ಚಡ್ಡಿ ಸುಡುವ ಕಾಂಗ್ರೆಸ್ (CONGRESS ) ಅಭಿಯಾನದ ವಿಚಾರವಾಗಿ ಕೆಲವು ಸೂಕ್ಷ್ಮ ವಿಚಾರಗಳ ಬಗ್ಗೆ ಮಾತಾಡಬಾರದು ಎಂದು ನಮಗೆ ಆದೇಶ ಬಂದಿದೆ. ಹೀಗಾಗಿ ಸೂಕ್ಷ್ಮ ವಿಚಾರಗಳ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ವಿ. ಸೋಮಣ್ಣ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು ಆರ್ ಎಸ್ ಎಸ್ ಈ ದೇಶಕ್ಕೆ ನೀಡಿರುವ ಕೊಡುಗೆ ಎಲ್ಲರಿಗೂ ಗೊತ್ತಿದೆ. ಈ ದೇಶದ ಪ್ರತಿ ಕಣ ಕಣದಲ್ಲೂ ಆರ್ ಎಸ್ ಎಸ್ ನ ಕೊಡುಗೆ ಇದೆ. ಕೆಲವರ ನಂಬಿಕೆಗಳಿಗೆ ಅಪಮಾನ ಅಗೌರವ ಮಾಡುವುದು ಸರಿಯಲ್ಲ ಎಂದಷ್ಟೇ ಹೇಳುತ್ತೇನೆ. ಇವೆಲ್ಲಾವೂ ಬೀದಿ ಜಗಳ ಆಗಬಾರದು. ಎಲ್ಲವೂ ಸುಖಾಂತ್ಯವಾಗಬೇಕು ಎಂದು ತಿಳಿಸಿದ್ರು. ಇದನ್ನೂ ಓದಿ : – RSS ಕಚೇರಿಗಳ ಮೇಲೆ ದಾಳಿ ಬೆದರಿಕೆ ಸಂದೇಶ – ರಾಜ್ಯದ ಸಂಘದ ಕಚೇರಿಗಳಿಗೆ ಬಿಗಿ ಭದ್ರತೆ
ಯಡಿಯೂರಪ್ಪ ಸಿದ್ದರಾಮಯ್ಯ ಭೇಟಿಯಾದ ವಿಚಾರ
ಅದು ಕೇವಲ ಸೌಹರ್ಧಯುತ ಭೇಟಿ. ಇಬ್ಬರು ಆಕಸ್ಮಿತವಾಗಿ ಭೇಟಿಯೇ ಆಗಬಾರದಾ.? ಅದನ್ನ ಯಾರು ವಿಡಿಯೋ ಮಾಡಿ ಹೊರಗಡೆ ಬಿಟ್ಟಿದ್ದಾರೆ. ಅವರಿಬ್ಬರು ರಾಜ್ಯಸಭೆ ವಿಚಾರವಾಗಿ ಮಾತನಾಡಿಯೇ ಇಲ್ಲಾ. ಈ ಭೇಟಿಗೆ ಬೇರೆ ತರಹದ ಅರ್ಥಗಳನ್ನ ಕಲ್ಪಿಸಬೇಡಿ ಎಂದು ಹೇಳಿದ್ರು.
ಇದನ್ನೂ ಓದಿ : – ದ್ವಿತೀಯ ಪಿಯು ಪಠ್ಯ ಪರಿಷ್ಕರಣೆ – ರೋಹಿತ್ ಚಕ್ರತೀರ್ಥಗೆ ಕೊಕ್..!