ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಮಳೆಗೆ ಜನ ಹೈರಾಣಾಗಿದ್ದಾರೆ.ಸಿಎಂ ಬಸವರಾಜ ಬೊಮ್ಮಾಯಿ (BASAVARAJ BOMMAI ) ಸಿಟಿ ರೌಂಡ್ಸ್ ಮಾಡುವ ಮೂಲಕ ಮಳೆ ಹಾನಿ ಪರಿಶೀಲನೆ ನಡೆಸಿದ್ದಾರೆ.
ಇದೀಗ ಸಿಎಂ ರೌಂಡ್ಸ್ ಬೆನ್ನಲ್ಲೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ( SIDDARAMAIH ) ಕೂಡಾ ಅಖಾಡಕ್ಕೆ ಇಳಿದಿದ್ದು, ನಗರದ ಬ್ಯಾಟರಾಯನಪುರ ಹಾಗೂ ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಥಣಿಸಂದ್ರ ವಾರ್ಡ್ ನ ಫಾತಿಮಾ ಲೇಔಟ್ ಗೆ ಭೇಟಿ ನೀಡಿ ಸ್ಲಂ ಪ್ರದೇಶಗಳಲ್ಲಿ ಪರೀಶಿಲನೆ ನಡೆಸಿದ್ರು. ಇದನ್ನೂ ಓದಿ : – ಜ್ಞಾನವಾಪಿ ಮಸೀದಿಯೊಳಗೆ ಇದೆಯಂತೆ ಶೇಷನಾಗನ ಶಿಲ್ಪಕಲೆ
ಹೆಬ್ಬಾಳ ರಾಜಕಾಲುವೆ ತುಂಬಿಹರಿದ ಪರಿಣಾಮ ಫಾತಿಮಾ ಲೇಔಟ್ ಮನೆಗಳಿಗೆ ನೀರು ನುಗ್ಗಿತ್ತು. ಶಿವಾಜಿನಗರ ಬ್ರಾಡ್ ವೇ ರೋಡ್ ಗೆ ಭೇಟಿ ನೀಡಿ ಹಫೀಜಾ ಸ್ಕೂಲ್ ಕಾಂಪೌಂಡ್ ಡ್ಯಾಮೇಜ್ ಆಗಿರೋದನ್ನ ಪರಿಶೀಲನೆ ನಡೆಸಿದ್ರು. ಕಾಮರಾಜರಸ್ತೆಯ ಗುಂಡಿ ಬಿದ್ದ ಜಾಗಗಳು, ಅಲಸೂರು ಗುಪ್ತ ಲೇಔಟ್ , ನಂತರ ಗಾಂಧಿನಗರ ಕ್ಷೇತ್ರದ ಸಿರೂರು ಪಾರ್ಕ್ ಗೆ ಭೇಟಿ ನೀಡಿದ್ರು. ಇದನ್ನೂ ಓದಿ : – ಸಿಎಂ ಬೊಮ್ಮಾಯಿ ನಗರ ಪ್ರದಕ್ಷಿಣೆಗೆ ಮಾಜಿ ಸಿಎಂ ಹೆಚ್ಡಿಕೆ ವ್ಯಂಗ್ಯ