ಹೊರಟ್ಟಿ ಮೊಮ್ಮಕ್ಕಳನ್ನ ಆಡಿಸುತ್ತ ಮನೆಯಲ್ಲಿ ಇರಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿಕೆ ವಿಚಾರಕ್ಕೆ ಬಸವರಾಜ್ ಹೊರಟ್ಟಿ (Basavaraj horatti) ಪ್ರತಿಕ್ರಿಯೆ ನೀಡಿದ್ದಾರೆ. ನನಗಿಂತ ಸಿದ್ದರಾಮಯ್ಯ ದೊಡ್ಡವನು, ಅವನ್ಯಾಕೆ ಮನೆಯಲ್ಲಿ ಕೂರಬಾರದು.
ಸಿದ್ದರಾಮಯ್ಯ ನನಗಿಂತ ಒಂದು ವರ್ಷ ಹತ್ತು ತಿಂಗಳ ದೊಡ್ಡವನು. ಅವನಿಗೆ ಮೂರು ಮೊಮ್ಮಕ್ಕಳು ಇದ್ದಾರೆ, ಒಬ್ಬರ ಕಣ್ಣಲ್ಲಿ ಬಟ್ಟು ಹಾಕಲು ಹೋದವರು ತಮ್ಮ ಕಣ್ಣು ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ರಾತ್ರಿ ಕಂಡ ಬಾವಿಗೆ ಹೊರಟ್ಟಿ ಹಗಲು ಬಿದ್ದರು ಎಂಬ ವಿಚಾರ
ಒಬ್ಬೊಬ್ಬರು ಒಂದೊಂದು ಕಡೆ ಬಿಳ್ತಾರೆ, ನಾನು ೧೬ ಸಿಎಂಗಳನ್ನ ನೋಡಿದ್ದೆನೆ, ೧೮೨ ಮಾಜಿ ಮಂತ್ರಿಗಳನ್ನು ನೋಡಿದ್ದೇನೆ. ೧೨ ಶಾಸಕರನ್ನ ನೋಡಿದ್ದೇನೆ, ನನ್ನ ಮಾಹಿತಿ ಈ ರಾಜ್ಯದಲ್ಲಿ ಯಾರಿಗೂ ಇಲ್ಲ. ವಿಧಾನ ಸೌಧದಲ್ಲಿ ಎಲ್ಲಿ ಯಾವ ಕಲ್ಲಿದೆ ಎಂದು ನನಗೆ ಗೊತ್ತಿದೆ. ಎಲ್ಲವನ್ನ ಹೇಳಲು, ಸುಧಾರಣೆ ಮಾಡಲು ಆಗಲ್ಲ ಎಂದು ಹೊರಟ್ಟಿ ತಿಳಿಸಿದ್ದಾರೆ. ಇದನ್ನೂ ಓದಿ : – ಶ್ರೀನಿವಾಸ್ ಗೌಡಗೆ ಮಾನ ಮರ್ಯಾದೆ ಇದ್ಯಾ ? – ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ
ಬಸವಣ್ಣನ ಅಪಪ್ರಚಾರ ವಿಚಾರ
ಯಾವುದೇ ಒಂದು ಪುಸ್ತಕ ಮಾಡಬೇಕಾದರೆ ಡಿಎಸ್ ಆರ್ ಟಿ ಒಳಗೆ ವಿಂಗ್ ಇದೆ. ಆ ವಿಂಗ್ ಬದಲು ಮಾಡುವರು ಅದನ್ನ ಅವರು ಸರ್ಕಾರಕ್ಕೆ ಕೊಡ್ತಾರೆ. ರಾಜಕಾರಣ ಮಾಡುವುದನ್ನ ಶಿಕ್ಷಣ ಇಲಾಖೆಗೆ ಬಿಡಬೇಕು ಎಂದು ಹೊರಟ್ಟಿ ಹೇಳಿದ್ದಾರೆ. ಇದೇ ವೇಳೆ ಹಿಂದುಳಿದ ಮತಗಳಿಗೆ ಕತ್ತರಿ ಬಿದ್ದರೆ ಬಿಳಲಿ ಬಿಡಿ, ನೋಡೋಣ ಎಂದು ತಿಳಿಸಿದ್ರು.
ಬಿಜೆಪಿಗೆ (BJP) ಹೊಗುವ ಸಂದರ್ಭದಲ್ಲಿ ನಾನು ಹುಬ್ಬಳ್ಳಿ ಅಂಜುಮನ್ (Anjuman) ಜೊತೆ ಮಾತನಾಡಿದ್ದೇನೆ. ಅವರನ್ನ ನಾನು ಈ ಹಿಂದಿನಿಂದಲೂ ಸಂರಕ್ಷಣೆ ಮಾಡುತ್ತಾ ಬಂದಿದ್ದೆನೆ. ಅನುದಾನ ಕೊಟ್ಟಿದ್ದೇನೆ, ಅವರು ಯಾವ ಪಕ್ಷಕ್ಕೆ ಮತ ಕೊಡದೇ ಇದ್ರೂ ನಿಮಗೆ ಮತ ಕೊಡ್ತೇನೆ ಎಂದಿದ್ದಾರೆ. ಅಲ್ಪಸಂಖ್ಯಾತರು ನನ್ನ ವಿರುದ್ಧ ಮತ ಹಾಕಲ್ಲ. ಬಹುಸಂಖ್ಯಾತರೇ ನನ್ನ ವಿರುದ್ಧ ಮತ ಹಾಕ್ತಾರೆ. ಒಳ್ಳೆಯ ಕೆಲಸ ಯಾರು ಮಾಡ್ತಾರೆ ಅವರಿಗೆ ನನ್ನ ಬೆಂಬಲ ಇದೆ. ಬಸವಣ್ಣ ನವರ ವಿಷಯ ಬಂದಾಗ ನಾನು ಸಂಪೂರ್ಣವಾಗಿ ನೂರುರಷ್ಡು ಅಪಪ್ರಚಾರ ಆಗಬಾರದು ಎಂದು ಹೇಳ್ತೇನೆ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಶಿಕ್ಷಕರ ಮತನೇ ಇಲ್ಲಾ. ಮೈಸೂರು ಬೆಂಗಳೂರು ಕಡೆ ಮಾತ್ರ ಇದ್ದಾರೆ . ನಾನು ಎಲ್ಲಿರುತ್ತೆನೆ ಅಲ್ಲಿ ಮತ ಇವೆ ಎಂದು ಹೊರಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : – ಕಾಂಗ್ರೆಸ್ ಪಕ್ಷದ 69 ಜನಕ್ಕೆ ಮತ ಹಾಕಿರೋದನ್ನ ನೋಡಿದ್ದೇನೆ – ಡಿ.ಕೆ.ಶಿವಕುಮಾರ್