ಕೊರೊನಾ ನಿಯಮ ಉಲ್ಲಂಘಿಸಿ ಮೇಕೆದಾಟು ಪಾದಯಾತ್ರೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರಿಗೆ ಸಮನ್ಸ್ ಜಾರಿ ಮಾಡಲಾಗಿದೆ.
ನಾಳೆ ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್ ನಾಯಕ ಹಾಗೂ ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಜನವರಿ 9 ರಂದು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ‘ಮೇಕೆದಾಟು ಪಾದಯಾತ್ರೆ’ ನಡೆಸಿದ್ದರು. ಇದನ್ನೂ ಓದಿ :- ಅರಬ್ ದೇಶಗಳಲ್ಲಿ ಭಾರತದ ಮೇಲೆ ಹಬ್ಬಿದ ವದಂತಿ ಏನು ಗೊತ್ತಾ…?
ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದ ಸಂದರ್ಭದಲ್ಲೂ ಪಾದಯಾತ್ರೆ ಹಮ್ಮಿಕೊಂಡಿದ್ದ ವಿಚಾರ ಹೈಕೋರ್ಟ್ ವರೆಗೂ ತಲುಪಿತ್ತು. ಹೈಕೋರ್ಟ್ ನಿರ್ದೇಶನ ಆಧರಿಸಿ ಜ.13ಕ್ಕೆ ರಾಮನಗರದಲ್ಲಿ ಪಾದಯಾತ್ರೆ ಕೊನೆಗೊಳಿಸಲಾಗಿತ್ತು.
ಇದನ್ನೂ ಓದಿ :- ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು – ರಾಜಪಕ್ಸೆ ಸಂಪುಟಕ್ಕೆ ಎಂಟು ಸಚಿವರು ಸೇರ್ಪಡೆ !