ಕುಟುಂಬ ಸಮೇತ ನಂಜುಂಡೇಶ್ವರನ ದರ್ಶನ ಪಡೆದ ಯದುವೀರ್ ಒಡೆಯರ್

ಮೈಸೂರಿನ ರಾಜವಂಶಸ್ಥ ಯದುವೀರ್ ಒಡೆಯರ್ (YADUVEER WADIYAR ) ಇಂದು ಕುಟುಂಬ ಸಮೇತ ನಂಜನಗೂಡಿನ ನಂಜುಂಡೇಶ್ವರನ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಪತ್ನಿ ತ್ರಿಷಿಕಾ ಯದುವೀರ್( TRISHIKA YADUVEER ) ಹಾಗೂ ಪುತ್ರ ಆದ್ಯವೀರ್ ಜೊತೆ ಆಗಮಿಸಿ ನಂಜುಂಡನ ದರುಶನ ಪಡೆದರು. ರಾಜ್ಯದಲ್ಲಿ ಉತ್ತಮ ಮಳೆ ಆಗುತ್ತಿದ್ದು ಅನ್ನದಾತನಿಗೆ ಶುಭ ಕೋರಿ ಪೂಜೆ ಸಲ್ಲಿಸಿದರು. ಇದನ್ನೂ ಓದಿ :- ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು – ರಾಜಪಕ್ಸೆ ಸಂಪುಟಕ್ಕೆ ಎಂಟು ಸಚಿವರು ಸೇರ್ಪಡೆ !

ದೇವಾಲಯದ ಸಿಬ್ಬಂದಿ ಮತ್ತು ಅಧಿಕಾರಿಗಳು ಮಹಾರಾಜ ಯದುವೀರ್ ಅವರಿಗೆ ಅದ್ಧೂರಿ ಗೌರವ ಸಲ್ಲಿಸಿದರು. ಸುಮಾರು ಅರ್ಧಗಂಟೆಗಳ ಕಾಲ ಗರ್ಭಗುಡಿ ಮುಂದೆ ಕುಳಿತ ಕುಟುಂಬ ರಾಜ್ಯದ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ದೇವಾಲಯದ ಸುತ್ತ ಪ್ರದರ್ಶನ ಹಾಕಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದ್ರು. ಇದನ್ನೂ ಓದಿ : – ಅರಬ್ ದೇಶಗಳಲ್ಲಿ ಭಾರತದ ಮೇಲೆ ಹಬ್ಬಿದ ವದಂತಿ ಏನು ಗೊತ್ತಾ…?

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!