ಅಸಮಾಧಾನಿತ ಕಾಂಗ್ರೆಸ್ ನಾಯಕ (Congress) ಎಸ್ ಆರ್ ಪಾಟೀಲ್ (SR.Patil) ಸಂಪರ್ಕ ವಿಚಾರಕ್ಕೆ ಬಾಗಲಕೋಟೆಯಲ್ಲಿ (Bagalkot) ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ(HD.Kumaraswamy) ಪ್ರತಿಕ್ರಿಯೆ ನೀಡಿದ್ದಾರೆ .ಇಲ್ಲಿಯವರೆಗೆ ನಾನು ಅವರ ಜೊತೆ( ಎಸ್ ಆರ್ ಪಾಟೀಲ್ ) ಚರ್ಚೆ ಮಾಡಿಲ್ಲ.
ಎಸ್ ಆರ್ ಪಾಟೀಲ್ ಮನೆಗೆ ಊಟಕ್ಕೆ ಹೋಗ್ತೀರಾ ಎಂಬ ಪ್ರಶ್ನೆ . ಇಲ್ಲ ಇಲ್ಲ ನನಗೆ ಆಹ್ವಾನ ಇಲ್ಲ .ಈಗ ನಾನು ಅವರನ್ನ ಭೇಟಿ ಮಾಡಿದ್ರೆ ಅದು ನನ್ನ ಸ್ವಾರ್ಥ ಆಗುತ್ತೆ. ವಿಧಾನ ಪರಿಷತ್ ಚುನಾವಣೆ ಮುಗಿದ ಮೇಲೆ ಸಂಧರ್ಭ ಬಂದ್ರೆ ನೋಡೋಣ.
ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ ಸೆಳೆಯುವ ವಿಚಾರ
ಅದರಲ್ಲಿ ಅವರೆಲ್ಲಾ ಪರಿಣಿತರಿದ್ದಾರೆ.ಈಗಾಗಲೇ ಪ್ರಯತ್ನ ಶುರುವಾಗಿದೆ. ಜೆಡಿಎಸ್ (Jds) ಮತ ಒಡೆಯಬೇಕೆನ್ನೋದು ಎರಡೂ ಪಕ್ಷದಲ್ಲಿ ನಡೆಯುತ್ತಿದೆ.ನಾನು ಆರಾಮವಾಗಿದ್ದೇನೆ.ನಮ್ಮ ಪಕ್ಷದ ಕೆಲವು ಶಾಸಕರಲ್ಲಿ ಭಿನ್ನಾಭಿಪ್ರಾಯ ಇರೋದು ನಿಜ.ಆ ಭಿನ್ನಾಭಿಪ್ರಾಯ ಹೊರತುಪಡಿಸಿ ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ಹಾಕ್ತಾರೆ ಅನ್ನೋ ವಿಶ್ವಾಸ ಇದೆ.ಬಿಜೆಪಿ ಕಾಂಗ್ರೆಸ್ ಏನೇ ಆಸೆ ಆಮಿಷ ತೋರಿಸಿದ್ರೂ ನಮ್ಮ ಮತ ಗಟ್ಟಿಯಾಗಿವೆ ಅನ್ನೋ ವಿಶ್ವಾಸ ನನಗಿದೆ. ಇದನ್ನೂ ಓದಿ : – ₹2000 ನೋಟುಗಳ ಸಂಖ್ಯೆ ಭಾರೀ ಇಳಿಕೆ! ಕುತೂಹಲ ಕೆರಳಿಸಿದ ಮೋದಿ ನಡೆ..!
ಜೆಡಿಎಸ್ ಕೆಲ ಶಾಸಕರು ಸಿದ್ದರಾಮಯ್ಯ ಭೇಟಿ ಮಾಡ್ತಿರೋ ವಿಚಾರ
ಇನ್ನು ಯಾರಾದ್ರೂ ವೈಯಕ್ತಿಕವಾಗಿ ಭೇಟಿ ಮಾಡಬಹುದು.ಅದಕ್ಕೂ ಚುನಾವಣೆಗೂ ಸಂಭಂದ ಇಲ್ಲ. ನಾವು ಯಾರಿಗೂ ಅಥರೈಸಡ್ ಮಾಡಿಲ್ಲ. ಪಕ್ಷದ ಮುಖಂಡರು, ಶಾಸಕರಿಗೆ ರಾಜ್ಯಸಭಾ ಚುನಾವಣೆ ಸಂಭಂದ ಬೇರೆ ನಾಯಕರ ಭೇಟಿಗೆ ಒಪ್ಪಿಗೆ ಕೊಟ್ಟಿಲ್ಲ. ಆದ್ರೆ ಅವರ ವೈಯಕ್ತಿಕ ವಿಷಯಕ್ಕೆ ಭೇಟಿ ಮಾಡಬಹುದು.ಆದ್ರೆ ಅದು ನನಗೆ ಸಂಭಂಧ ಇಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು . ಇದನ್ನೂ ಓದಿ : – ಕಾಂಗ್ರೆಸ್ ನವ್ರ ಬುದ್ಧಿ ಭ್ರಮಣೆ ಆಗಿದೆ – ಅರುಣ್ ಸಿಂಗ್