ಹೊರಟ್ಟಿ ಅವರಿಗೆ ಟಿಕೆಟ್ ವಿಚಾರವಾಗಿ ಧಾರವಾಡದಲ್ಲಿ ಶಾಸಕ ಅರವಿಂದ ಬೆಲ್ಲದ್ ಪ್ರತಿಕ್ರಿಯೆ ನೀಡಿದ್ದಾರೆ. ಟಿಕೆಟ್ ಹೊರಟ್ಟಿ ಅವರಿಗೇ ಫೈನಲ್ ಆಗುತ್ತೆ. ಪಾರ್ಟಿ ಈ ಬಗ್ಗೆ ಅಧಿಕೃತವಾಗಿ ಘೋಷಿಸಲಿದೆ.
ಮೋಹನ್ ಲಿಂಬಿಕಾಯಿ ಮೊದನಿಂದಲೂ ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಟಿಕೆಟ್ಗಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ ಹೊರಟ್ಟಿಯವರಿಗೆ ಟಿಕೆಟ್ ಫೈನಲ್ ಆಗುತ್ತೆ. ಚುನಾವಣೆ ಕೆಲಸ ಬಹಳ ಇರುತ್ತೆ. ಹೀಗಾಗಿ ಅವರು ಕಚೇರಿ ಆರಂಭಿಸಿದ್ದಾರೆ. ನಿನ್ನೆ ಪಕ್ಷದ ವರಿಷ್ಠರನ್ನು ಭೇಟಿಯಾಗಿದ್ದಾರೆ. ಇದನ್ನೂ ಓದಿ :- ಬೆಂಗಳೂರಿನ ಫ್ಲೈಓವರ್ ನಲ್ಲಿ ಭೀಕರ ಅಪಘಾತ- ಬೈಕ್ ಸವಾರ ಸಾವು
ಆ ಹಿನ್ನೆಲೆಯಲ್ಲಿ ತಯಾರಿ ನಡೆಸಿದ್ದಾರೆ. ಟಿಕೆಟ್ ಸಿಗೋ ಭರವಸೆ ಅವರಿಗಿದೆ. ಹೀಗಾಗಿ ಸಿದ್ಧತೆ ನಡೆಸಿದ್ದಾರೆ. ಲಿಂಬಿಕಾಯಿ ಪಕ್ಷೇತರರಾಗಿ ಕಣಕ್ಕಿಳಿಯೋ ವಿಚಾರ ಅದನ್ನು ನೀವು ಅವರಿಗೆ ಕೇಳಬೇಕು. ಆ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ತಿಳಿಸಿದ್ರು.
ಇದನ್ನೂ ಓದಿ :- ತೆರಿಗೆ ಕಡಿತ ಕುರಿತು ಪರಿಶೀಲನೆ ನಡೆಸಲಾಗುತ್ತದೆ – ಸಿಎಂ ಬೊಮ್ಮಾಯಿ