ಬೆಂಗಳೂರಿನ ಫ್ಲೈಓವರ್ ನಲ್ಲಿ ಭೀಕರ ಅಪಘಾತ- ಬೈಕ್ ಸವಾರ ಸಾವು

ಬೆಂಗಳೂರಿನ ಫ್ಲೈಓವರ್ನಲ್ಲಿ ಇಂದು ಮುಂಜಾನೆಯೇ ಬೈಕ್ ಸವಾರ ಮೃತಪಟ್ಟಿದ್ದಾನೆ. ಬೆಂಗಳೂರಿನ ಜಕ್ಕೂರು ಏರೊಡ್ರಮ್ ಬಳಿ ಘಟನೆ ನಡೆದಿದ್ದು,

ಏರ್ಪೋರ್ಟ್ ಫ್ಲೈಓವರ್ ಮೇಲೆ ಬೈಕ್ ನಲ್ಲಿ 45 ವರ್ಷದ ಸವಾರ ಮತ್ತು ಹಿಂಬದಿಯಲ್ಲಿ 12 ವರ್ಷದ ಬಾಲಕ ಕುಳಿತುಕೊಂಡಿದ್ದ. ಬೈಕ್ ಎಡಬದಿಯಲ್ಲಿ ಹೋಗುತ್ತಿದ್ದರೂ ಕಾರೊಂದು ರಭಸವಾಗಿ ಬಂದು ಗುದ್ದಿದೆ. ವಾಹನ ಸವಾರ ಫ್ಲೈ ಓವರ್ ಮೇಲಿಂದ ಕೆಳಗೆ ಬಿದ್ದು ಕೊನೆಯುಸಿರೆಳೆದಿದ್ದಾನೆ. ಬಾಲಕನಿಗೆ ಗಂಭೀರ ಗಾಯವಾಗಿದೆ. ಮೃತ ವ್ಯಕ್ತಿ ಗೋವಿಂದಪ್ಪ(44) ಎಂದು ಗುರುತಿಸಲಾಗಿದ್ದು, ಅವರು ಜಕ್ಕೂರು ಲೇಔಟ್ ನಿವಾಸಿಯಾಗಿದ್ದರು. ಇದನ್ನೂ ಓದಿ :- ತೆರಿಗೆ ಕಡಿತ ಕುರಿತು ಪರಿಶೀಲನೆ ನಡೆಸಲಾಗುತ್ತದೆ – ಸಿಎಂ ಬೊಮ್ಮಾಯಿ

ಗೋವಿಂದಪ್ಪ ಅವರು ಸಂಬಂಧಿಕರ ಮಗ ಸಂಜಯ್ ಜಕ್ಕೂರು ಏರೋಡ್ರಮ್ ತೋರಿಸಲು ಏರ್ಪೋರ್ಟ್ ಫ್ಲೈಓವರ್ ಬಳಿ ಬಂದಿದ್ದರು. ಈ ವೇಳೆ ಗೋವಿಂದಪ್ಪ ಫ್ಲೈಓವರ್ ಮೇಲೆ ಮೊಪೆಡ್ ಬೈಕ್ ನಿಲ್ಲಿಸಿ ಸಂಜಯ್ಗೆ ಏರೋಡ್ರಮ್ ತೋರಿಸುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ಮೊಪೆಡ್ಗೆ ಡಿಕ್ಕಿ ಹೊಡೆದಿದೆ. ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಅಪಘಾತಕ್ಕೆ ಒಳಗಾದವರ ಗುರುತು ಪತ್ತೆ ಮಾಡುತ್ತಿದ್ದಾರೆ. ಕೆ.ಆರ್.ಪುರಂ ಬಳಿ ಕಾರು ಚಾಲಕನನ್ನ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ :-  ಅಪಘಾತ ಅತ್ಯಂತ ದುರದೃಷ್ಟಕರವಾಗಿದ್ದು, ಮೃತಪಟ್ಟ ಎಲ್ಲರ ಆತ್ಮಕ್ಕೆ ಶಾಂತಿ ಸಿಗಲಿ – ಸಿಎಂ ಬೊಮ್ಮಾಯಿ ಟ್ವೀಟ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!