ಹಿಜಾಬ್ ಕುರಿತಂತೆ ಹೈಕೋರ್ಟ್ ತೀರ್ಪು ಬಂದಿದ್ದು ಮೂಲಭೂತವಾಗಿ ಧರ್ಮಕ್ಕೆ ಅಡಚಣೆ ಇಲ್ಲ ಎಂದಿದೆ. ಸುಪ್ರೀಂ ಕೋರ್ಟ್ ಗೆ ಹೋಗುವುದರ ಬಗ್ಗೆ ಸಮಾಜದ ಮುಖಂಡರು ತೀರ್ಮಾನ ತೆಗೆದುಕೊಳ್ತಾರೆ ಎಂದು ಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ಸ್ಪಷ್ಟಪಡಿಸಿದ್ದಾರೆ. ಇದನ್ನ ಧರ್ಮದ ದೃಷ್ಟಿಯಿಂದ ನೋಡಬಾರದು. ಸಂವಿಧಾನದ ದೃಷ್ಠಿಯಿಂದ ನೋಡಬೇಕು. ಹೆಣ್ಣುಮಗಳು ತಿಲಕ, ವಿಭೂತಿ ಇಡುವುದು ಧರ್ಮದಲ್ಲಿಲ್ಲ. ಆದರೆ ಅದು ನನಗೆ ಇಡಬೇಕೆಂಬ ಇಷ್ಟವಿದೆ. ನೀವು ಬೇಡ ಅನ್ನೋಕೆ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಈ ತೀರ್ಪು ಸುಪ್ರೀಂನಲ್ಲಿ ಚಾಲೆಂಜ್ ಆಗಬೇಕಿದೆ. ಇದೇ ವೇಳೆ ತಾಯಂದಿರು ಸೆರಗು ಹಾಕುವುದು ತಪ್ಪೇ ಎಂದು ಕೇಳಿದ್ದಾರೆ. ತೀರ್ಪಿನಿಂದ ಬೀದಿಗಿಳಿಯಬೇಕಾದ ಅವಶ್ಯಕತೆಯಿಲ್ಲ. ನ್ಯಾಯಾಂಗದ ಮೇಲೆ ನಮಗೆ ವಿಶ್ವಾಸವಿದೆ.
ಸುಪ್ರೀಂಗೆ ಹೋಗುವುದಕ್ಕೆ ಅವಕಾಶವಿದೆ. ಲಾಯರ್ ಮಜೀದ್ ಮೆಮನ್ ಬಾಂಬೆಯವರು ಅವರ ಜೊತೆಯೂ ನಾನು ಚರ್ಚೆ ಮಾಡಿದ್ದೇನೆ. ಒಗ್ಗಟ್ಟಾಗಿ ಸುಪ್ರೀಂಗೆ ಹೋಗಲು ಪ್ರಯತ್ನ ಮಾಡ್ತಿದ್ದೇವೆ. ರಾಜ್ಯದಲ್ಲಿ ಶಾಂತಿ ಕಾಪಾಡುವುದಕ್ಕೆ ನೋಡ್ತಿದ್ದೇವೆ ಎಂದು ತಿಳಿಸಿದ್ದಾರೆ.
0 176 Less than a minute