ರಾಜ್ಯಸಭಾ ಚುನಾವಣೆಗೆ (Rajyasabha election) ನಾಮಪತ್ರ ಸಲ್ಲಿಸೋಕೆ ಮೇ 31 ಕೊನೆ ದಿನವಾಗಿತ್ತು.ಆರು ನಾಮಪತ್ರ ಸಲ್ಲಿಕೆ ಆಗಿವೆ. ಇವತ್ತು ನಾಮಪತ್ರ (Nomination) ವಾಪಸ್ ಹಿಂಪಡೆಯುವುದಕ್ಕೆ ಕೂನೆ ದಿನ ಆಗಿತ್ತು.
ಆದ್ರೆ ಇಲ್ಲಿಯವರೆಗೆ ಯಾರು ವಾಪಸ್ ನಾಮಪತ್ರ ವಾಪಸ್ ಪಡೆದಿಲ್ಲ ಎಂದು ಚುನಾವಣಾಧಿಕಾರಿ M.K. ವಿಶಾಲಕ್ಷಿ (MK.Vimalakshi) ಹೇಳಿದ್ದಾರೆ.ಹೀಗಾಗಿ ಜೂನ್ 10 ರಂದು (June 10) ರಾಜ್ಯಸಭಾ ಚುನಾವಣೆ ನಡೆಯಲಿದೆ. ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಚುನಾವಣೆ ನಡೆಯುತ್ತೆ. 5 ಗಂಟೆಗೆ ಮತದಾನದಲ್ಲಿ ಆಯ್ಕೆಯಾದವರ ಘೋಷಣೆ ಮಾಡಲಾಗುತ್ತೆ. ಪ್ರತಿ ಒಂದು ಸ್ಥಾನಕ್ಕೆ 45 ಮತ ಬೇಕು.ನಾಲ್ಕನೇ ಸ್ಥಾನಕ್ಕೆ ಎರಡನೇ ಪ್ರಶಾಸ್ತ್ಯ ಮತ ಯಾರು ಹೆಚ್ಚು ತೆಗೆದುಕೊಳ್ತಾರೆ ಅವರು ಗೆಲುವು ಸಾಧಿಸ್ತಾರೆ. ಕೊನೆಗೆ ಯಾರು 45 ಸ್ಥಾನ ಗಳಿಸದಿದ್ದರು ಯಾರು ಹೆಚ್ಚು ಮತಗಳನ್ನ ಗಳಿಸುತ್ತಾರೆ ಅವರನ್ನ ನಾಲ್ಕನೇ ಆಯ್ಕೆ ಆಗಿ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ : – ರಾಜ್ಯ ಸಭೆ ಚುನಾವಣೆ – ಖರ್ಗೆ ಮೇಲೆ ನಂಬಿಕೆ ಇಟ್ಟಿರೋ ದೇವೇಗೌಡರು