ವಿಜಯೇಂದ್ರಗೆ ಟಿಕೆಟ್ ತಪ್ಪಿದ ವಿಚಾರವಾಗಿ ತುಮಕೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ( ARGAJENDRA) ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ವಿಜಯೇಂದ್ರ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಇದು ಪಕ್ಷದ ಆದೇಶ, ಪಕ್ಷದ ನಿರ್ಣಯಕ್ಕೆ ನಾವೆಲ್ಲರು ತಲೆಬಾಗಲೇ ಬೇಕು.
ನಮ್ಮ ಪಕ್ಷದ ಯುವ ನಾಯಕರು, ರಾಜ್ಯದ ಉಪಾಧ್ಯಕ್ಷರು, ಸದ್ಯ ವಿಧಾನ ಪರಿಷತ್ ಸ್ಥಾನಕ್ಕಿಂತ ಮೇಲಿನ ಹುದ್ದೆಯಲ್ಲಿದ್ದಾರೆ. ಪಕ್ಷದಲ್ಲಿ ಬಹಳಷ್ಟು ಜನ ಟಿಕೆಟ್ ಆಕಾಂಕ್ಷಿಗಳು ಇರ್ತಾರೆ. ಇದನ್ನ ಯೋಚನೆ ಮಾಡಿ ನಮ್ಮ ಹೈಕಮಂಡ್ ನಿರ್ಣಯ ಮಾಡಿದೆ. ಈ ಬಗ್ಗೆ ವಿಜಯೇಂದ್ರ ಅವರಿಗೆ ಒಪ್ಪಿಗೆ ಇದೆ ಎಂದು ಹೇಳಿದ್ರು.
ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕುವ ವಿಚಾರ
ಅಂತದ್ದೇನು ಇಲ್ಲ, ಯಡಿಯೂರಪ್ಪ (YEDDEURAPPA) ನವರು ನಮ್ಮ ಮಹಾನ್ ನಾಯಕರು. ಪಕ್ಷ ಬೆಳೆಸಿದವರು, ನಾವು ಅವರನ್ನ ಅಗೌರವಿಸುವಂತ ಯಾವ ಪ್ರಶ್ನೆಯೂ ಇಲ್ಲ. ಬೇರೆ ಬೇರೆ ಸಮುದಾಯಕ್ಕೆ ಟಿಕೆಟ್ ಹಂಚಿಕೆ ಮಾಡಿದ್ದಾರೆ ಎಂದು ತಿಳಿಸಿದ್ರು. ಇದನ್ನೂ ಓದಿ :- ವಿಜಯೇಂದ್ರಗೆ ತಪ್ಪಿದ ಟಿಕೆಟ್ – ಬಿಎಸ್ ವೈ ಪುತ್ರನ ನಾಗಾಲೋಟಕ್ಕೆ ಸಂತೋಷ್ ಹಾಕಿದ್ರಾ ಬ್ರೇಕ್ ..?
ಮಂಗಳೂರು ತಾಂಬೂಲ ಪ್ರಶ್ನೆ ವಿಚಾರ
ಆ ಭಾಗದ ಜನರ ನಂಬಿಕೆ ಅದು. ಹಾಗಾಗಿ ನಾನೇನು ಅದನ್ನ ಅಲ್ಲಗೆಳೆಯೋಕೆ ಆಗಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಲು ಮಂಗಳೂರು ಪೊಲೀಸರು ಎಲ್ಲಾ ಸಿದ್ದತೆಗಳನ್ನ ಮಾಡಿಕೊಂಡಿದ್ದಾರೆ. ಮಸೀದಿಯ ರಿನೋವೇಷನ್ ಗೆ ಹೋದಾಗ ದೇವಾಲಯದ ಸ್ಟ್ರಕ್ಚರ್ ಅವಶೇಶ ಸಿಕ್ಕಿದೆ. ಅದರ ಬಗ್ಗೆ ಕೋರ್ಟ್ ಕೂಡಾ ಸ್ಟೇ ಕೊಟ್ಟಿದೆ. ಆ ಕಾಮಗಾರಿಯನ್ನ ಮುಂದುವರಿಸಬಾರದು ಅಂತ ಸ್ಟೇ ಕೊಟ್ಟಿದೆ. ಈ ನಿಟ್ಟಿನಲ್ಲಿ ಪೊಲೀಸರು ಲಾ ಅಂಡ್ ಆರ್ಡರ್ ಕಾಪಾಡುವ ಕೆಲಸ ಮಾಡ್ತಿದ್ದಾರೆ. ಹಿಂದೂ ದೇವಾಲಯ ಆಗಿದ್ರೆ ಒಳಗಡೆ ಬಿಡ್ತೀರಾ ಎಂಬ ಪ್ರಶ್ನೆಗೆ ಮಾತನಾಡಿದ ಅವರು ಚರ್ಚೆ ಮಾಡಿ ನಿರ್ಧಾರ ಕೈಗೊಳ್ತಿವಿ. ಆ ವಿಚಾರ ಕೋರ್ಟ್ ನಲ್ಲಿದೆ ಎಂದು ನುಣುಚುಕೊಂಡಿದ್ದಾರೆ .
ಇದೇ ವೇಳೆ ತುಮಕೂರಿನಲ್ಲಿ ಪೊಲೀಸರಿಗೆ ಬೆಂಕಿ ತಗುಲಿದ ವಿಚಾರ ಕುರಿತಂತೆ ಪ್ರತಿಕ್ರಿಯಿಸಿ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ 112 ಗೆ ಕರೆ ಬರುತ್ತೆ. ಕೂಡಲೇ ನಮ್ಮ ಎರಡು ಜನ ಪೊಲೀಸರು ಸ್ಥಳಕ್ಕೆ ಹೋಗ್ತಾರೆ. ಈ ವೇಳೆ ಇಬ್ಬರು ಪೊಲೀಸ್ ಸಿಬ್ಬಂದಿಗೆ ಬೆಂಕಿ ತಗುಲಿ ಅವರ ಸ್ಥಿತಿ ಗಂಭೀರವಾಗಿದೆ. ಆ ಪೊಲೀಸರ ಮೇಲೆ ನನಗೆ ಅಭಿಮಾನ ಬರುತ್ತೆ. ನಮ್ಮ ಪೊಲೀಸರನ್ನ ಬೇರೆ ಬೇರೆ ವಿಚಾರಕ್ಕೆ ಬೈಯ್ತೆವೆ. ಪೊಲೀಸರ ಇಂತಹ ಶ್ಲಾಘನೀಯ ಕಾರ್ಯವನ್ನ ನಾವು ಮೆಚ್ಚಲೆ ಬೇಕು. ಇನ್ನೊಬ್ಬರ ಪ್ರಾಣ ಉಳಿಸಲು ತಮ್ಮ ಪ್ರಾಣವನ್ನ ಒತ್ತೆ ಇಡ್ತಾರೆ ಅಂದ್ರೆ ನಮಗೆ ಹೆಮ್ಮೆ. ಆ ಪೊಲೀಸ್ ಸಿಬ್ಬಂದಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ. ಅಷ್ಟು ವೆಚ್ಚವನ್ನ ಪೊಲೀಸ್ ಇಲಾಖೆ ವತಿಯಿಂದ ಭರಿಸಲಾಗುತ್ತೆ. ಆ ಪೊಲೀಸ್ ಸಿಬ್ಬಂದಿಗೆ 2 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ಗುಣಮುಖವಾಗುವವರೆಗೆ ಆ ಪೊಲೀಸ್ ಸಿಬ್ಬಂದಿಗೆ ರಜೆ ಸಹಿತ ಸಂಬಳ ಭತ್ಯೆ ಕೊಡಲಾಗುತ್ತೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ :- ವಿಜಯೇಂದ್ ಗೆ ಸಿಗದ ಪರಿಷತ್ ಟಿಕೆಟ್ – ಮಾಜಿ ಸಿಎಂ ಬಿಎಸ್ ವೈ ಗೆ ಶಾಕ್