ನಟ ಕಿಚ್ಚ ಸುದೀಪ್ (Sudeep) ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ (DK.Shivakumar) ಅವರನ್ನ ಭೇಟಿಯಾಗಿರೋದು ತೀವ್ರ ಕುತೂಹಲ ಮೂಡಿಸಿದೆ. ಈ ನಡುವೆ ಸುದೀಪ್ ಚಿತ್ರದುರ್ಗ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ತೆರೆಮರೆಯಲ್ಲಿ ಕಸರತ್ತು.ನಡೆಸುತ್ತಿದ್ದಾರೆ ಎನ್ನಲಾಗಿದೆ. ಎರಡು ಮೀಸಲು ಕ್ಷೇತ್ರದ,ಮಧ್ಯೆ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲು ತಯಾರಿ ನಡೆದಿದೆ.
ಚಳ್ಳಕೆರೆ ಎಸ್ಟಿ,ಮೊಳಕಾಲ್ಮೂರು ಎಸ್ಟಿ ಈ ಎರಡು ಕ್ಷೇತ್ರದ ಒಂದರಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ. ಈ ಭಾಗದಲ್ಲಿ ಪ್ರಾಬಲ್ಯ ಹೊಂದಲು ಕಾಂಗ್ರೆಸ್ (Congress) ತೀವ್ರ ಕಸರತ್ತು ನಡೆಸುತ್ತಿದೆ. ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರುಗಳ ಜೊತೆಯಲ್ಲಿ ಈಗಾಗಲೇ ನಟ ಸುದೀಪ್ ಚರ್ಚಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಪಕ್ಷ ಸಂಪರ್ಕಿಸಿದ ಬೆನ್ನಲ್ಲೇ ಬಿಜೆಪಿ ಅಲರ್ಟ್ ಆಗಿದೆ. ಇದನ್ನೂ ಓದಿ : – ನಾನು ಮರಳಿ ಮಾತೃ ಪಕ್ಷ ಜೆಡಿಎಸ್ ಗೆ ಸೇರ್ಪಡೆಯಾಗುತ್ತಿದ್ದೇನೆ – ಕೆ.ಟಿ ಶಾಂತಕುಮಾರ್
ಬಿಜೆಪಿ (BJP) ಸಚಿವರು, ಸಿಎಂ ಜೊತೆಯಲ್ಲಿಯೂ ಸುದೀಪ್ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಯಾವ ಪಕ್ಷ,ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂಬ ಗುಟ್ಟನ್ನ ನಟ ಸುದೀಪ್ ಇನ್ನೂ ಬಿಟ್ಟುಕೊಟ್ಟಿಲ್ಲ. ಹೀಗಾಗಿ ನಟ ಸುದೀಪ್ ನಡೆ ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : – 50% ಆಫರ್ ಸಿಕ್ಕಿದ್ದೇ ತಡ ದಂಡ ಪಾವತಿಗೆ ಮುಗಿಬಿದ್ದ ವಾಹನ ಸವಾರರು