Cinema

‘ಟೈಗರ್​ 3’ ಸಿನಿಮಾದ ಒಂದೇ ಫ್ರೇಮ್‍ನಲ್ಲಿ ಶಾರುಖ್, ಸಲ್ಮಾನ್, ಹೃತಿಕ್

ಸಲ್ಮಾನ್ ಖಾನ್, ಶಾರುಖ್ ಖಾನ್, ಹೃತಿಕ್ ರೋಷನ್ ಬಾಲಿವುಡ್‍ನ ದೃವತಾರೆಗಳು.. ಈ ಸೂಪರ್ ಸ್ಟಾರ್‍ಗಳು ಒಂದೇ ಸಿನಿಮಾದಲ್ಲಿದ್ರೆ.. ಅಬ್ಬಾ ಕೇಳೋದಿಕ್ಕೆ ಎಷ್ಟು ಥ್ರಿಲ್ಲಿಂಗ್ ಆಗಿದೆ ಅಲ್ವಾ.? ಇನ್ನು ನೋಡಿದ್ರೆ, ಹೌದು, ಅಂತಹದೊಂದು ಸೆನ್ಸೇಷನಲ್ ನ್ಯೂಸ್‍ಗೆ ಬಿಟೌನ್ ಸಾಕ್ಷಿಯಾಗ್ತಿದೆ.. ಮತ್ತಿನ್ಯಾಕೆ ತಡ.. ಅದೇನು ಆ ಇಂಟ್ರಸ್ಟಿಂಗ್ ಮ್ಯಾಟರ್ ಇಲ್ಲಿದೆ ಓದಿ…


ಇಂಡಿಯನ್ ಸಿನಿ ಇಂಡಸ್ಟ್ರೀಯಲ್ಲಿ ಈಗಂತು ಮಲ್ಟಿಸ್ಟಾರರ್ ಜಮಾನ ಜೋರಾಗಿ ನಡೀತಿದೆ.. ಪ್ಯಾನ್ ಇಂಡಿಯಾ ಕ್ರೇಜ್ ಇರುವುದರಿಂದ, ಎಲ್ಲಾ ಭಾಷೆಯ ಸೂಪರ್‍ಸ್ಟಾರ್‍ಗಳು ಒಂದೇ ಫ್ರೇಮ್‍ನಲ್ಲಿ ಕಾಣಿಸಿಕೊಳ್ತಿದ್ದಾರೆ.. ಇದೀಗ ಅಂತದ್ದೇ ಮೆಗಾ ಮಲ್ಟಿಸ್ಟಾರರ್ ಸಿನಿಮಾ ಬಗ್ಗೆ ಬಿಟೌನ್‍ನಲ್ಲಿ ಸದ್ದು ಸುದ್ದಿ ಮಾಡ್ತಿದೆ.. ಹೌದು, ಅದಕ್ಕೆ ಅಡಿಪಾಯ ಹಾಕಿದ್ದಾರೆ ಸಲ್ಮಾನ್ ಖಾನ್, ಶಾರುಖ್ ಖಾನ್, ಹೃತಿಕ್ ರೋಷನ್..


ಸಲ್ಮಾನ್ ಖಾನ್, ಶಾರುಖ್ ಖಾನ್, ಹೃತಿಕ್ ರೋಷನ್ ಬಾಲಿವುಡ್ ಸ್ಟಾರ್ ಸ್ಟಾರ್‍ಗಳು. ಕೋಟ್ಯಾನು ಕೋಟಿ ಅಭಿಮಾನಿಗಳ ಸರದಾರರು.. ಅಂದಹಾಗೆ ಸಲ್ಲು, ಶಾರುಖ್, ಹೃತಿಕ್ ಒಂದೇ ಫ್ರೇಮ್‍ನಲ್ಲಿ ಕಾಣಿಸಿಕೊಂಡಿದ್ದಾರೆ ಅನ್ನೊ ಸುದ್ದಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ.. ಅದಕ್ಕೆ ಟೈಗರ್ ಥ್ರೀ ಸಿನಿಮಾ ಸಾಕ್ಷಿಯಾಗ್ತಿದೆ..


ಸಲ್ಮಾನ್ ಖಾನ್ ನಟನೆಯ ಟೈಗರ್ – 3 ಚಿತ್ರದಲ್ಲಿ ಪಠಾಣ್ ಆಗಿ ಶಾರುಖ್ ಖಾನ್ ಗೆಸ್ಟ್ ಅಪಿಯರೆನ್ಸ್ ಮಾಡ್ತಿರೋದು ಗೊತ್ತೇಯಿದೆ. ಅಚ್ಚರಿ ಎಂದರೆ ಇದೇ ಚಿತ್ರದಲ್ಲಿ ವಾರ್ ಚಿತ್ರದ ಮೇಜರ್ ಕಬೀರ್ ಕಾಣಿಸಿಕೊಳ್ಳುತ್ತಾನೆ ಎನ್ನಲಾಗ್ತಿದೆ. ಅಂದರೆ ಟೈಗರ್ – 3 ಚಿತ್ರದಲ್ಲಿ ಹೃತಿಕ್ ಕೂಡ ಅತಿಥಿ ಪಾತ್ರದಲ್ಲಿ ದರ್ಶನ ಕೊಡುತ್ತಾರೆ ಎನ್ನುವ ಸುದ್ದಿ ಇದೆ… ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ..
ಟೈಗರ್ ಸರಣಿ, ಪಠಾಣ್ ಹಾಗೂ ವಾರ್ ಸಿನಿಮಾಗಳು ನಿರ್ಮಾತೃ ಯಶ್ ರಾಜ್ ಫಿಲ್ಮ್ಸ್.. ಮುಂದೆ ಈ ಸಂಸ್ಥೆ, ಈ ಮೂರು ಸಿನಿಮಾ ಕತೆಗಳನ್ನು ಸೇರಿಸಿ ಒಂದು ಮೆಗಾ ಪ್ರಾಜೆಕ್ಟ್ ಮಾಡುವ ಲೆಕ್ಕಾಚಾರ ನಡೀತಿದೆ. ಆದರೆ ಟೈಗರ್ – 3 ಚಿತ್ರದಲ್ಲೇ ಅದರ ಸಣ್ಣ ಝಲಕ್ ತೋರಿಸುತ್ತಾರೆ ಎನ್ನಲಾಗ್ತಿದೆ. ಕಬೀರ್ ಆಗಿ ಹೃತಿಕ್, ಟೈಗರ್ ಸಲ್ಲು, ಪಠಾಣ್ ಶಾರುಕ್ ಜೊತೆ ಮಿಂಚುವ ಸುಳಿವು ಸಿಗುತ್ತಿದೆ. ಅದೇ ನಿಜವಾದರೆ ಅಫ್‍ಕೋರ್ಸ್, ಬಾಲಿವುಡ್ ಪ್ರೇಕ್ಷಕರಿಗೆ ಹಬ್ಬವೇ ಸರಿ.
ಅವಿನಾಶ್ ಟೈಗರ್ ಸಿಂಗ್ ರಾಥೋರ್ ಆಗಿ ಸಲ್ಮಾನ್ ಖಾನ್ ಈಗಾಗಲೇ 2 ಸಿನಿಮಾಗಳಲ್ಲಿ ಸಕ್ಸಸ್ ಕಂಡಿದ್ದಾರೆ. 2012ರಲ್ಲಿ ಏಕ್ ಥಾ ಟೈಗರ್ ಸಿನಿಮಾ ಬಂದಿತ್ತು. 5 ವರ್ಷಗಳ ಬಳಿಕ ಅದರ ಸೀಕ್ವೆಲ್ ಟೈಗರ್ ಜಿಂದಾ ಹೈ ತೆರೆ ಕಂಡಿತ್ತು. ಅಲ್ಲಿಂದ ಮುಂದೆ ವಾರ್ ಹಾಗೂ ಪಠಾಣ್ ಸಿನಿಮಾಗಳು ಬಂದವು. ಇದೀಗ ನವೆಂಬರ್ 12ಕ್ಕೆ ಟೈಗರ್ 3 ಸಿನಿಮಾ ರಿಲೀಸ್ ಆಗಲಿದೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸೆನ್ಸೇಷನಲ್ ಸೃಷ್ಟಿಸಿವೆ.
ಇನ್ನು ಟೈಗರ್-3 ಚಿತ್ರದಲ್ಲಿ ಇಮ್ರಾನ್ ಹಶ್ಮಿ ವಿಲನ್ ಆಗಿ ಅಬ್ಬರಿಸಿದ್ರೆ, ನಾಯಕಿಯಾಗಿ ಕತ್ರೀನಾ ಕೈಫ್ ಮಿಂಚಿ ಹರೆಸುತ್ತಿದ್ದಾರೆ. ಇನ್ನುಳಿದಂತೆ ರೇವತಿ, ವಿಶಾಲ್ ಜೆತ್ವಾ, ಕುಮುದ್ ಮಿಶ್ರಾ, ರಣ್ವೀರ್ ಶೌರಿ ತಾರಾಗಣದಲ್ಲಿದ್ದಾರೆ. ಇದೀಗ ಹೃತಿಕ್ ರೋಷನ್ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗ್ತಿದೆ. ಆದರೆ ಸ್ಯಾಂಪಲ್‍ಗಳಲ್ಲಿ ಅದರ ಝಲಕ್ ಮಾತ್ರ ಕಾಣಿಸಿಲ್ಲ. ಟೈಗರ್, ಪಠಾಣ್, ಕಬೀರ್ ಒಂದೇ ಫ್ರೇಮ್ನಲ್ಲಿ ಕಂಡರೆ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲ್ಲ. ಒಟ್ನಲ್ಲಿ ಈ ಬಾರಿ ಬಾಲಿವುಡ್ ಬಾಕ್ಸಾಫೀಸ್ನಲ್ಲಿ ದೀಪಾವಳಿ ಸಡಗರ ಧಾಮ್ ಧೂಮ್ ಎನ್ನುವಂತಿರುತ್ತದೆ ಅನ್ನೋದು ಗೊತ್ತಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!