ನ್ಯೂ ಇಯರ್ ಹತ್ರ ಆಗ್ತಿದ್ದಂಗೆಯೇ ಪೊಲೀಸರೆಲ್ರೂ ಡ್ರಗ್ ಮಾಫಿಯಾ ಮೇಲೆ ಕಣ್ಣಿಟ್ಟಿದ್ದಾರೆ.. ಈ ನಡುವೆ ಇಯರ್ ಎಂಡ್ ನಲ್ಲಿ ಬರ್ಬರವಾಗಿ ಕೊಲೆಯೊಂದು ನಡೆದು ಹೋಗಿದೆ.. ಅನ್ನದಾನ ಮಾಡ್ತಿದ್ದ ಓರ್ವನ ಮೇಲೆ ಅಟ್ಯಾಕ್ ಮಾಡಿದ್ದ ಹಂತಕರು ಹೋಟೆಲ್ ವೊಂದರಲ್ಲಿ ಕೊಚ್ಚಿ ಓಡಿದ್ದಾರೆ..
ಹೌದು.. ಪೊಲೀಸರೆಲ್ರೂ ನ್ಯೂ ಇಯರ್ ಸಂಬಂಧ ಫುಲ್ ಅಲರ್ಟ್ ಆಗಿದ್ದಾರೆ.. ರೌಡಿಗಳ ಮನೆ ಮೇಲೆ ದಾಳಿ, ಡ್ರಗ್ ಪೆಡ್ಲರ್ಸ್ ಗಳ ಮನೆ ಮೇಲೆ ದಾಳಿ ನಡೆಸಿ ಡ್ರಗ್ ಮಾಫಿಯಾ ವಿರುದ್ದ ಕಣ್ಣಿಟ್ಟಿದ್ದಾರೆ.. ಈಗಾಗಲೇ ಆರ್ಗನೈಸ್ಡ್ ಕ್ರೈಂ ಮೇಲೆ ಒಂದು ಕಣ್ಣಿಟ್ಟಿದ್ದ ಪೊಲೀಸರು ನ್ಯೂ ಇಯರ್ ಹತ್ರ ಬರ್ತಿದ್ದಂತೆಯೇ ಡ್ರಗ್ ಮಾಫಿಯಾ ಮೇಲೆ ಫೋಕಸ್ ಮಾಡಿದ್ರು.. ಈ ನಡುವೆ ವ್ಯಕ್ತಿಯೋರ್ವನ ಬರ್ಬರ ಹತ್ಯೆ ಆಗಿದೆ.. ಆಡುಗೋಡಿ ಠಾಣಾ ವ್ಯಾಪ್ತಿಯ ಲಕ್ಕಸಂದ್ರದ ಆಂಜಿನೇಯ ದೇವಸ್ಥಾನದ ಬಳಿ ಅನ್ನದಾನ ಮಾಡ್ತಿದ್ದ ಜಯಪ್ರಕಾಶ್ ಅಲಿಯಾಸ್ ನಾಯಿ ಅಪ್ಪಿ ಎಂಬಾತನನ್ನ ಅಟ್ಟಾಡಿಸಿಕೊಂಡು ಓಡಿದ್ದ ನಾಲ್ಕೈದು ಜನರ ತಂಡ ಹೋಟೆಲ್ ವೊಂದರಲ್ಲಿ ಕೊಚ್ಚಿ ಕೊಂದಿದ್ದಾರೆ..
ಈ ಫೋಟೋದಲ್ಲಿರೋ ಈತನೇ ನೋಡಿ ಜಯಪ್ರಕಾಶ್ ಅಲಿಯಾಸ್ ನಾಯಿ ಅಪ್ಪಿ ಅಂತಾ.. ಹಳೇ ಲಕ್ಕಸಂದ್ರದ ನಿವಾಸಿಯಾಗಿರೋ ಈತ 38ರ ಆಸು ಪಾಸಿನಾತ.. 2006ರಲ್ಲಿ ಪಿಕೆ ರಮೇಶ್ ಎಂಬಾತನ ಕೊಲೆ ಕೇಸ್ ನಲ್ಲಿ ಜೈಲಿಗೆ ಹೋಗಿದ್ದ ಅನುಭವ ಕೂಡ ಇದೆ.. ಅದಾದ ನಂತರ ಕ್ರೈಂ ಆ್ಯಕ್ಟಿವಿಟೀಸ್ ಇಂದ ಕೊಂಚ ದೂರ ಇದ್ದು ಆಟೋ ಡ್ರೈವಿಂಗ್ ಟ್ರಾವೆಲಿಂಗ್ ಬ್ಯುಸಿನೆಸ್ ನಲ್ಲಿ ಬ್ಯುಸಿ ಇದ್ದ.. ಪ್ರತೀ ವರ್ಷದಂತೆ ಇಂದು ಹನುಮಜಯಂತಿ ಹಿನ್ನೆಲೆ ಲಕ್ಕಸಂದ್ರ ಬಸ್ ನಿಲ್ದಾಣದ ಬಳಿ ಸಂಜೆ ಅನ್ನದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ.. ಆದ್ರೆ ಈತನ ಮೇಲೆ ಅದ್ಯಾವ ದ್ವೇಷನೋ ಮೊದಲೇ ಈತನ ಮೇಲೆ ಕಣ್ಣಿಟ್ಟಿದ್ದ ಹಂತಕರ ತಂಡ ಅನ್ನದಾನ ಮಾಡ್ತಿದ್ದ ಜಾಗಕ್ಕೆ ಬಂದು ಅಟ್ಯಾಕ್ ಮಾಡಿದ್ದಾರೆ.. ಈ ವೇಳೆ ತಪ್ಪಿಸಿಕೊಳ್ಳೋ ಯತ್ನ ಮಾಡಿದ್ದ ಅಪ್ಪಿ ಅಲ್ಲೇ ಇದ್ದ ಹೋಟೆಲ್ ವೊಂದರಲ್ಲಿ ಅಡಗಲು ಯತ್ನಿಸಿದ್ದಾನೆ.. ಈ ವೇಳೆ ಹೋಟೆಲ್ ನಲ್ಲಿಯೇ ದಾಳಿ ಮಾಡಿದ್ದ ಹಂತಕರ ಟೀಂ ಲಾಂಗು ಮಚ್ಚಿನಿಂದ ಅಟ್ಯಾಕ್ ಕೊಚ್ಚಿದವರು ಮುಖ ಗುರುತು ಸಿಗದಂತೆ ಕೊಂದು ಎಸ್ಕೇಪ್ ಆಗಿದ್ದಾರೆ..
ಇನ್ನು ವಿಚಾರ ಗೊತ್ತಾಗ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ್ದ ಆಡುಗೋಡಿ ಪೊಲೀಸರು ತನಿಖೆ ನಡೆಸ್ತಿದ್ದಾರೆ.. ಹಳೆ ವೈಷಮ್ಯ ಹಿನ್ನೆಲೆ ಕೊಲೆ ನಡೆದಿರೋ ಶಂಕೆ ಇದ್ದು ಐದು ಟೀಂ ನಿಂದ ತನಿಖೆ ಮುಂದುವರೆದಿದೆ..