ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ನಗರದ ಹೋಸುರ ಎಂಬ ಗ್ರಾಮದಲ್ಲಿ ತಡರಾತ್ರಿಯಲ್ಲಿ ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಹಾಗೂ ಚೇಲಾಗಳಿಂದ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.
ಗ್ರಾಮದ ಮುಸ್ಲಿಂ ಸಮುದಾಯದ ಯುವಕರು ಇಂದು ನಡೆಯಬೇಕಿದ್ದ 75ನೇ ಗಣರಾಜೋತ್ಸವದ ತಯಾರಿ ನಡೆಸಿ ಧ್ವಜಸ್ಥಂಬ ನೆಟ್ಟಿದ್ದರು. ಇದನ್ನು ಕಂಡ ಅದೆ ಸಮುದಾಯದ ಹಿರಿಯರು ಹಳೆ ದ್ವೇಷದಿಂದ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಆಯುವರನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಕ್ರಂ ಜಮಾದಾರ ಅಲ್ಲಿ, ಮಹೇಶ್ ವಾಡಗಿ, ಇರ್ಫಾನ್ ಮಿರ್ಜಿ, ಮುಬಾರಕ್ ಇನಾಮ್ದಾರ್, ಬರ್ಕತ್ ಬಿಕಾಂ ಮೇಲೆ ಹಲ್ಲಿಯಾಗಿದೆ. ಹಲ್ಲೆ ಮಾಡಿರುವ ಆಸಾಮಿಗಳು ಅಯ್ಯುಬ ಖಾನ್ ಹೊರಟ್ಟಿ ರಾಜು ಕುಳ್ಳೋಳ್ಳಿ ಜಮಾಲ್ ಹೊರಟ್ಟಿ ಅಲ್ಲಾವುದ್ದೀನ್ ಕುಳ್ಳೋಳಿ ಹಟೆಲ್ ಪತ್ತೆ ರಂಜಾನ್ ಹೊರಟ್ಟಿ ನಬೀಸಾ ಪತ್ತೆ ಶರೀಪ ಹೊರಟ್ಟಿ ಇವರೆಲ್ಲರೂ ಸೇರಿ ಯುವಕರ ಮೇಲೆ ಮಾರಣಾಂತಿಕ ಹಲ್ಲೆಯನ್ನು ಮಾಡಿದ್ದಾರೆ.
ಎಲ್ಲ ಹಿರಿಯರು ಬೇರೆ ಯಾರು ಅಲ್ಲ ಮುಸ್ಲಿಂ ಸಮುದಾಯದ ಅಂಜುಮನ್ ಕಮೀಟಿಯ ಎಲ್ಲಾ ಹಿರಿಯರು ಸೇರಿ ಈತರಹದ ಹಲ್ಲೆ ನಡಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ ಕೂಡಲೇ ಪೋಲಿಸ್ ಇಲಾಖೆ ಆರೋಪಿಗಳು ಯಾರೆ ಆಗಿದ್ದರು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತಿದ್ದಾರೆ.