ಬೆಂಗಳೂರು : ಅವರಿಬ್ಬರೂ ಅತ್ತೆ ಮಾವನ ಮಕ್ಕಳು ಇಬ್ಬರು ಏಳು ವರ್ಷದಿಂದ ಪ್ರೀತಿಸಿ ಮದುವೆನೂ ಆಯ್ತು. ಆದರೆ ಮದುವೆ ಆದ ಮೂರೇ ದಿನದಲ್ಲಿ ಆ ಯುವತಿ ಇನ್ನೊಬ್ಬನ ಜೊತೆ ಎಸ್ಕೇಪ್ ಆಗಿದ್ದು, ಎಸ್ಕೇಪ್ ಆದ ಯುವತಿಯ, ಯುವಕರ ಜೊತೆಗಿನ ಚೆಲ್ಲಾಟ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಮೂಲತಃ ಬೆಂಗಳೂರಿನ ದೊಡ್ಡಕಲ್ಲಸಂದ್ರದ ನಿವಾಸಿಗಳಾದ ಮಂಜುನಾಥ್ ಮತ್ತು ಮನುಜಾ ಕಳೆದ ಏಳು ವರ್ಷಗಳಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಮನೆಯವರ ವಿರೋಧದ ನಡುವೆ ಎರಡು ಬಾರಿ ಮದುವೆ ಆಗಿದ್ದರು. ಮದುವೆಯಾದ ಬಳಿಕ ಮನುಜಳನ್ನು ಪೋಷಕರು ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡುವುದಾಗಿ ನಂಬಿಸಿ ಕರೆದೊಯ್ದಿದ್ದರು. ಆದರೆ ನಾಲ್ಕೈದು ವರ್ಷ ಕಳೆದರೂ ಮದುವೆ ಮಾಡಿಕೊಟ್ಟಿರಲಿಲ್ಲ.
ಕಳೆದೊಂದು ವಾರದ ಹಿಂದೆ ಉಟ್ಟ ಬಟ್ಟೆಯಲ್ಲಿ ಮಂಜುನಾಥ್ ಕುಟುಂಬದ ಜೊತೆ ಮನುಜ ಬಂದಿದ್ದಳು. ಹಿರಿಯರ ಸಮ್ಮುಖದಲ್ಲಿ ಜನವರಿ 26ರಂದು ಮದುವೆ ಮಾಡಲಾಗಿತ್ತು. ಇತ್ತ ಮನುಜಾ ಪೋಷಕರಿಂದ ತಲಘಟ್ಟಪುರ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಾಗಿದ್ದು, ಈ ವೇಳೆ ತಲಘಟ್ಟಪುರ ಠಾಣೆಯಲ್ಲಿ ತಾನು ಒಪ್ಪಿ ಮದುವೆಯಾಗಿರುವುದಾಗಿ ಹೇಳಿದ್ದಳು. ಇದಾದ ಬಳಿಕ ಮತ್ತೆ ಪೋಷಕರು ಮನೆಗೆ ಕರೆದುಕೊಂಡು ಹೋಗಿದ್ದರು. ಮೂರು ದಿನದ ಬಳಿಕ ಮಂಜುನಾಥ್ ವಾಪಸ್ ಮನೆಗೆ ಬಂದಾಗ ಮನುಜ ಕಾಣೆಯಾಗಿದ್ದಾಳೆ.