ಕ್ರಿಕೆಟಿಗ ಕೆ.ಸಿ ಕಾರಿಯಪ್ಪ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಯುವತಿಯನ್ನ ಮದ್ವೆಯಾಗೋದಾಗಿ ನಂಬಿಸಿ ವಂಚನೆ ಮಾಡಿದ್ದಾರಂತೆ. ಸದ್ಯ ಕ್ರಿಕೆಟರ್ ಕಾರಿಯಪ್ಪ ಅವ್ರ ಪ್ರೇಮ ಪುರಾಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮಾಜಿ ಸೈನಿಕರೊಬ್ಬರ ಪುತ್ರಿ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಕೊಡಗು ಮೂಲದ ಕ್ರಿಕೆಟಿಗ ಕೆ.ಸಿ.ಕಾರಿಯಪ್ಪ ವಿರುದ್ದ ಗಂಭೀರ ಆರೋಪ ಕೇಳಿ ಬಂದಿದೆ.ಇನ್ಸ್ಟಾ ಗ್ರಾಮ್ ನಲ್ಲಿ ಪರಿಚಯವಾಗಿದ್ದ ಯುವತಿಯನ್ನ ಮದ್ವೆಯಾಗೋದಾಗಿ ನಂಬಿಸಿ ವಂಚಿಸಿದ್ದಾರಂತೆ. ಇನ್ನು ಕಾರಿಯಪ್ಪ ಅವ್ರಿಂದ ವಂಚನೆಗೊಳಗಾದ ಯುವತಿಯೂ ಕೊಡಗು ಮೂಲದವ್ರಾಗಿದ್ದು, ಎರಡು ವರ್ಷಗಳ ಹಿಂದೆ ಇಬ್ಬರಿಗೂ ಇನ್ಸ್ಟಾ ದಲ್ಲಿ ಪರಿಚಯವಾಗಿತ್ತಂತೆ. ನಂತರ ಪರಿಚಯ ಪ್ರೇಮಕ್ಕೆ ತಿರುಗಿದ್ದು, ದೈಹಿಕ ಸಂಪರ್ಕವೂ ಬೆಳೆಸಿ ಕೊನೆಗೆ ಸದ್ಯಕ್ಕೆ ಮಗು ಬೇಡ ಅಂತ ಅಬಾರ್ಷನ್ ಮಾಡಿಸಲು ಕಾರಿಯಪ್ಪನೇ ಬಲವಂತವಾಗಿ ಯುವತಿಗೆ ಮಾತ್ರೆ ನುಂಗಿಸಿದ್ದರಂತೆ.
ಅದಾದ ಬಳಿಕ ಕಾರಿಯಪ್ಪ ಯುವತಿಯನ್ನ ಅವೈಡ್ ಮಾಡೋದಕ್ಕೆ ಶುರು ಮಾಡಿದ್ದಾನಂತೆ. ಅದೇ ವೇಳೆ ಕಾರಿಯಪ್ಪನ ಮತ್ತೊಬ್ಬ ಗರ್ಲ್ ಫ್ರೆಂಡ್ ಈ ಯುವತಿಗೆ ಕರೆ ಮಾಡಿ ವಿಚಾರಿಸಿದ್ದಾಳೆ. ಈ ವೇಳೆ ನನಗೆ ಮೋಸ ಮಾಡ್ತಿದ್ದೀಯ ನನ್ನನ್ನ ಮದ್ವೆಯಾಗು ಅಂತ ಒತ್ತಾಯಿಸಿದ್ದು, ಅದಕ್ಕೆ ವಿರೋಧ ವ್ಯಕ್ತಪಡಿಸಿದನಂತೆ ಕಾರಿಯಪ್ಪ. ಈ ಸಂಬಂಧ ನೊಂದ ಯುವತಿ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಬಳಿಕ ಡ್ರಾಮ ಶುರು ಮಾಡಿದ ಕಾರಿಯಪ್ಪ ಐಪಿಎಲ್ ಮೂಗಿದ ಬಳಿಕ ಮದುವೆ ಆಗೋದಾಗಿ ನಂಬಿಸಿ ಕೇಸ್ ವಾಪಸ್ಸು ತೆಗೆಸಿಕೊಳ್ಳುವಂತೆ ಮಾಡಿದ್ದಾನಂತೆ.ನಂತರ ಮನೆಗೆ ಬಂದು ಮದ್ವೆಯಾಗೋದಾಗಿ ಮಾತುಕತೆ ಆಡಿ, ಟೂರ್ನಮೆಂಟ್ ಅದು ಇದು ಅಂತ ಅವೈಡ್ ಮಾಡಿದ್ದಾನಂತೆ. ಹೀಗಾಗಿ ನನಗೆ ಮೋಸ ಮಾಡಿದ್ದಾನೆಂದು ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾಳೆ. ಅತ್ತ ಕಾರಿಯಪ್ಪ ಸಹ ಯುವತಿ ವಿರುದ್ದ ಕೌಂಟರ್ ಕಂಪ್ಲೈಂಟ್ ದಾಖಲಿಸಿದ್ದು, ಯುವತಿ ನಡೆತೆ ಸರಿ ಇಲ್ಲ. ನನ್ನ ಮನೆ ಬಳಿಬಂದು ಗಲಾಟೆ ಮಾಡಿ, ಪೋಷಕರಿಗೆ ಬೆದರಿಕೆ ಹಾಕ್ತಾಳೆ ಅಂತ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯ ಇಬ್ಬರು ಒಬ್ಬರಿಗೋಬ್ಬರು ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದು, ಇಬ್ಬರ ಜಗಳ ಪೊಲೀಸ್ ಠಾಣೆ ಮೆಟ್ಟಿಲೆರಿದ್ದು, ಮುಂದೆ ಇಬ್ಬರ ಪ್ರೇಮ ಪುರಾಣ ಎಲ್ಲಿಗೆ ಹೋಗಿ ನಿಲ್ಲುತ್ತೆ ಕಾದು ನೋಡಬೇಕು.