Crime News

ತಂಗಿಗೆ ರಕ್ಷಣೆ ನೀಡಲು ಹೋಗಿ ಅಣ್ಣನೇ ಬಲಿಯಾದ ರೋಚಕತೆ…

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದಲ್ಲಿ ಭೀಕರ ಘಟನೆಯೊಂದು ನಡೆದಿದೆ. ತನ್ನ ತಂಗಿಗೆ ಮೆಸೇಜ್ ಮಾಡಬೇಡ ಎಂದು ವಾರ್ನ್ ಮಾಡಲು ಹೋದ ಅಣ್ಣನನ್ನ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

ರಾಯಚೂರು: ತಂಗಿಗೆ ಮೆಸೇಜ್ ಮಾಡ ಬೇಡ ಎಂದು ಬುದ್ಧಿವಾದ ಹೇಳಲು ಹೋಗಿದ್ದ ಅಣ್ಣನ ಹತ್ಯೆ ಮಾಡಲಾಗಿರುವ ಭೀಕರ ಘಟನೆ ಜಿಲ್ಲೆಯ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದಲ್ಲಿ ನಡೆದಿದೆ. ಚಾಕುವಿನಿಂದ ಇರಿದು ದೇವರಾಜ್(23) ಎಂಬಾತನನ್ನು ಹತ್ಯೆ ಮಾಡಲಾಗಿದೆ. ಆರೋಪಿಗಳಾದ ಬಸವರಾಜ್ ಹಾಗೂ ಹನುಮಂತ ಎಂಬುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆರೋಪಿ ಬಸವರಾಜ್, ಮೃತ ದೇವರಾಜ್​ನ ತಂಗಿ ಹಿಂದೆ ಬಿದ್ದಿದ್ದ. ಆಕೆಗೆ ಪ್ರೀತಿಸುವಂತೆ ಕಿರುಕುಳ ನೀಡ್ತಿದ್ದ. ಮೆಸೇಜ್ ಮಾಡೋದು, ಸಿಕ್ಕಸಿಕ್ಕಲ್ಲಿ ಮಾತನಾಡಿಸುವುದನ್ನು ಮಾಡುತ್ತಿದ್ದ. ಈ ಬಗ್ಗೆ ತಂಗಿ ಅಣ್ಣನ ಬಳಿ ಅಳಲು ತೋಡಿಕೊಂಡಿದ್ದಳು. ಹೀಗಾಗಿ ದೇವರಾಜ್ ಆರೋಪಿ ಬಸವರಾಜ್​ಗೆ ಬೈದು ಬುದ್ಧಿವಾದ ಹೇಳಿದ್ದ. ಇದರಿಂದ ಸಿಟ್ಟಿಗೆದ್ದ ಬಸವರಾಜ್ ಪಾಠ ಕಲಿಸಲೇ ಬೇಕು ಎಂದು ನಿರ್ಧರಿಸಿ ತನ್ನ ಸ್ನೇಹಿತ ಲಿಂಗಣ್ಣನಿಂದ ಮೆಸೇಜ್ ಮಾಡಿಸಿದ್ದ. ಇದರಿಂದ ಮತ್ತಷ್ಟು ಕೆರಳಿದ ಮೃತ ದೇವರಾಜ್ ಇವನಿಗೆ ಈ ರೀತಿ ಹೇಳಿದ್ರೆ ಅರ್ಥ ಆಗಲ್ಲ ಎಂದು ನಿನ್ನೆ(ಜೂನ್ 23) ಮತ್ತೆ ಮಾತಾಡಲು ಹೋಗಿದ್ದಾನೆ. ಈ ವೇಳೆ ದೇವರಾಜ್ ಹಾಗೂ ಬಸವರಾಜ್ ಕಡೆಯವರ ಮಧ್ಯೆ ಗಲಾಟೆ ನಡೆದಿದೆ. ಆಗ ಬಸವರಾಜ್ ಚಾಕುವಿನಿಂದ ಇರಿದು ದೇವರಾಜ್​ನನ್ನು ಹತ್ಯೆಗೈದಿದ್ದಾನೆ. ಘಟನೆಯಲ್ಲಿ ಆರೋಪಿಗಳಾದ ಬಸವರಾಜ್ ಹಾಗೂ ಹನುಮಂತನಿಗೂ ಗಾಯಗಳಾಗಿದ್ದು ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಸ್ಕಿ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ. ಜಾತಿ ನಿಂದನೆ ಆರೋಪದಡಿ ಮೃತ ದೇವರಾಜ್ ಹಾಗೂ ಮೌನೇಶ್ ವಿರುದ್ಧ ಪ್ರತಿ ದೂರು ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!