ಸಿಲಿಕಾನ್ ಸಿಟಿಯ ಮನೆಗಳಲ್ಲಿ ನೀರು ಕಾಯಿಸಲು ಸೌದೆ ಒಲೆಗಳು ಕಣ್ಮರೆಯಾಗಿ ಬಹಳ ವರ್ಷಗಳೇ ಕಳೆದಿದೆ.. ಸ್ನಾನಕ್ಕೆ ಬಿಸಿನೀರಿಗಾಗಿ ಸೋಲಾರ್, ಎಲೆಕ್ಟ್ರಾನಿಕ್ ಗೀಸರ್ ಹಾಗೂ ಗ್ಯಾಸ್ ಗೀಸರ್ ಮೇಲೆ ಅವಲಂಬಿತರಾಗಿದ್ದಾರೆ.. ಆದರೆ ಕೆಲವೊಂದು ಟೆಕ್ನಾಲಜಿಯ ಬಳಕೆಯಲ್ಲಿನ ನ್ಯೂನ್ಯತೆಯೇ ಸಾವಿಗೆ ಆಹ್ವಾನ ನೀಡುತ್ತೆ.. ಗ್ಯಾಸ್ ಗೀಸರ್ ದುರಂತಕ್ಕೆ ಯುವತಿಯೊಬ್ಬಳ ಧಾರುಣ ಅಂತ್ಯದ ಸ್ಟೋರಿ..
ಗ್ಯಾಸ್ ಗೀಸರ್ ಸಿಲಿಕಾನ್ ಸಿಟಿ ಜನರ ಪ್ರಾಣ ಹಿಂಡ್ತಿದೆ.ಸ್ನಾನಕ್ಕೆ ಅಂತಾ ಹೋಗೋರು ಸ್ನಾನದ ಕೋಣೆಯಲ್ಲೇ ಉಸಿರು ಚೆಲ್ತಿದ್ದಾರೆ. ಗ್ಯಾಸ್ ಗೀಸರ್ ನಿಂದ ಬಿಡುಗಡೆ ಆಗೊ ಕಾರ್ಬನ್ ಮೋನಾಕ್ಸೈಡ್ ಅನ್ನೋ ವಿಷ ಅನಿಲ ಕ್ಷಣ ಮಾತ್ರದಲ್ಲಿ ಕೊಲ್ತಿದೆ.ಕೆಳ ದಿನದ ಹಿಂದಷ್ಟೇ ಗ್ಯಾಸ್ ಗೀಸರ್ ವಿಷ ಅನಿಲಕ್ಕೆ ತಾಯಿ ಮಗು ಅಸ್ವಸ್ಥ ಗೊಂಡಿದ್ರು.ಸಂಜಯನರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಬೆಚ್ಚಿ ಬೀಳಿಸಿತ್ತು.ಘಟನೆಯಿಂದ ತಾಯಿ ರಮ್ಯಾ ಸಾವನ್ನಪ್ಪಿದ್ರೆ ಪುಟ್ಟ ಕಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿತಿದೆ.ಈ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿಬಿಟ್ಟಿದೆ.
ಹೌದು..ಈ ಫೋಟೋದಲ್ಲಿ ಕಾಣ್ತಿರೋ ಯುವತಿಯ ಹೆಸರು ರಾಜೇಶ್ವರಿ.. ವಯಸ್ಸು ಕೇವಲ 23 ವರ್ಷ.. ಕಾಮಾಕ್ಷಿಪಾಳ್ಯ ಮೀನಾಕ್ಷಿ ನಗರ ನಿವಾಸಿ.. ಬಿಕಾಂ ಪಧವೀದರೆಯಾಗಿದ್ದ ರಾಜೇಶ್ವರಿ ಸೋದರ ಸಂಬಂಧಿಯೊಬ್ಬರ ಮದುವೆಯ ನಿಮಿತ್ತ ಕೆಲಸಕ್ಕೆ ರಜೆಯನ್ನು ಹಾಕಿ ಮನೆಯಲ್ಲೇ ಇದ್ಳು.ಮದುವೆ ಕೂಡ ಮುಗಿದಿತ್ತು..ಸಂಬಂಧಿಯೊಬ್ಬರ ತಿಥಿ ಕಾರ್ಯಕ್ಕೆ ಹೋಗಿ 21 ರಂದು ಬಸವೇಶ್ವರನಗರದಲ್ಲಿರುವ ತಮ್ಮ ಮನೆಗೆ ವಾಪಸ್ಸಾಗಿದ್ರು..ಹೀಗೆ ಬಂದಾಕೆ ಮಧ್ಯಾಹ್ನ 12.45 ರಿಂದ 1 ಗಂಟೆ ಸುಮಾರಿಗೆ ಸ್ನಾನಕ್ಕೆ ಅಂತಾ ಸ್ನಾನದ ಕೊಠಡಿಗೆ ಹೋಗಿದ್ದಾಳೆ.ಈ ವೇಳೆ ಸ್ನಾನ ಮಾಡಲು ಗ್ಯಾಸ್ ಗೀಸರ್ ಆನ್ ಮಾಡಿದ್ದಾಳೆ.15 ನಿಮಿಷ ಕಳೆದರು ಹೊರಗೆ ಬಂದಿರ್ಲಿಲ್ಲ.ಹಾಗಾಗಿ ಸಹೋದರ ಏನಾಯ್ತು ಅಂತಾ ಬಾಗಿಲು ಮುಟ್ಟಿದ್ದಾನೆ ಡೋರ್ ಓಪನ್ ಆಗಿಯೇ ಇತ್ತು ಆದರೆ ಅಹೋದರಿ ಮಾತ್ರ ಪ್ರಜ್ಙಾಹೀನ ಸ್ಥಿತಿಯಲ್ಲಿ ಬಿದ್ದಿದ್ಳು..
ತಕ್ಷಣ ರಾಜೇಶ್ವರಿಯನ್ನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ರು ಅಷ್ಟರಲ್ಲಾಗಲೇ ಯುವತಿ ಸಾವನ್ನಪ್ಪಿರೋದಾಗಿ ವೈದ್ಯರು ತಿಳಿಸಿದ್ದಾರೆ.ಗ್ಯಾಸ್ ಗೀಸರ್ ನಿಂದ ಹೊರ ಬಂದ ಕಾರ್ಬನ್ ಮೋನಾಕ್ಸೈಡ್ ಯುವತಿಯ ಪ್ರಾಣ ತೆಗೆದಿರೊ ಸತ್ಯ ಕೂಡ ಗೊತ್ತಾಗಿದೆ.ಮಗಳ ಸಾವಿನಿಂದ ನೊಂದಿರೊ ತಂದೆ.ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು.ಮೊದಲು ಗ್ಯಾಸ್ ಗೀಸರ್ ಬಳಸೋದನ್ನ ನಿಲ್ಲಿಸಬೇಕು..ಬ್ಯಾನ್ ಮಾಡ್ಬೇಕು ಅಂತಾ ಅಳಲು ತೋಡಿಕೊಂಡ್ರು.. ಅದೇನೇ ಹೇಳಿ ಗ್ಯಾಸ್ ಗೀಸರ್ ಅನ್ನ ಎಷ್ಟೇ ಎಚ್ಚರಿಕೆಯಿಂದ ಬಳಸಿದ್ರು ಅಷ್ಟೇ ಒಂದಲ್ಲ ಒಂದು ದಿನ ಅಪಾಯ ಅನ್ನೋದು ಗ್ಯಾರಂಟಿ..ಅದಕ್ಕೆ ಸಾಕ್ಷಿ ಎಂಬಂತೆ ಗ್ಯಾಸ್ ಗೀಸರ್ ನಿಂದಾಗಿ ಸಾಲು ಸಾಲು ಸಾವುಗಳು ಸಂಭವಿಸ್ತಾನೆ ಇದೆ..ಅದಕ್ಕೆ ಪರ್ಯಾಯ ದಾರಿಯನ್ನು ಜನ ಕಂಡುಕೊಳ್ಳಲೇಬೇಕು..ಇಲ್ಲದಿದ್ರೆ ನಿಮಗೂ ಒಂದು ದಿನ ಆಘಾತ ತಪ್ಪಿದ್ದಲ್ಲ.