FoodHealthLife Style

ಅವರೆಕಾಳಿನಿಂದ ಸಿಗುವ ಪ್ರಮುಖ ಆರೋಗ್ಯ ಲಾಭಗಳು ತಿಳಿಯಿರಿ.?

ಹೆಲ್ತ್‌ ಟಿಪ್ಸ್‌ : ಅವರೆಕಾಳಿನಲ್ಲಿ ಹಲವು ವಿಟಮಿನ್‌ಗಳಿವೆ. ಅಲ್ಲದೇ ಖನಿಜಾಂಶಗಳು, ಪ್ರೋಟೀನ್ ಮತ್ತು ನಾರಿನಾಂಶವು ಇದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಅವರೆಕಾಳು ವಿಟಮಿನ್ ಬಿಯಿಂದ ಸಮೃದ್ಧವಾಗಿದ್ದು, ಇದು ದೇಹದ ಅಂಗಾಂಶಗಳಿಗೆ ಬೇಕಾಗಿರುವಂತಹ ಶಕ್ತಿ ನೀಡುತ್ತದೆ.ಅವರೆ ಕಾಳು ದೇಹಕ್ಕೆ ಅಗತ್ಯವಿರುವಂತಹ ಶಕ್ತಿ ಒದಗಿಸುವುದರೊಂದಿಗೆ ಮೆದುಳು ಮತ್ತು ನರಕೋಶಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಕಾರಿ ಆಗಿವೆ.

ನಿದ್ರಾಹೀನತೆ ತಗ್ಗಿಸಲು ಸಹಕಾರಿ..
ಅವರೆಕಾಳನ್ನು ಸೇವಿಸುವುದರಿಂದ ಅಥವಾ ಆಹಾರದಲ್ಲಿ ಬಳಸುವುದರಿಂದ ಹಲವು ಉಪಯೋಗಗಳಿವೆ. ಅವುಗಳಲ್ಲಿ ನಿದ್ರಾಹೀನತೆ ತಗ್ಗಿಸುವುದು ಸಹ ಒಂದಾಗಿದೆ.

ಅವರೆಕಾಳನ್ನು ಸೇವನೆ ಮಾಡುವುದರಿಂದಾಗಿ ಇದರಲ್ಲಿ ಇರುವ ಪೋಷಕಾಂಶಗಳು ಮೆದುಳಿಗೆ ಒಳ್ಳೆಯದು.

ಅವರೆಕಾಳಿನಲ್ಲಿರುವ ಮೆಗ್ನಿಶಿಯಂ ಅಂಶವು ಮನಸ್ಥಿತಿ ಸುಧಾರಣೆ ಮಾಡುವುದು. ಮೆಗ್ನಿಶಿಯಂ ನಿದ್ರಾಹೀನತೆಯನ್ನು ತಗ್ಗಿಸುವುದು.

ಇದನ್ನು ಸೇವನೆ ಮಾಡಿದರೆ ಅದರಿಂದ ರಾತ್ರಿ ವೇಳೆ ಒಳ್ಳೆಯ ನಿದ್ರೆ ಬರುತ್ತದೆ ಎನ್ನುವುದು ವರದಿಗಳಲ್ಲಿ ಸಾಬೀತಾಗಿದೆ.

ರಕ್ತದೊತ್ತಡ ತಗ್ಗಿಸಲು ಅನುಕೂಲಕರ..
ಅಧಿಕ ರಕ್ತದೊತ್ತಡದ ಸಮಸ್ಯೆ ಇರುವವರಿಗೆ ಅವರೆ ಕಾಳು ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡುವುದು.

ಇದರಲ್ಲಿ ಉತ್ತಮ ಪ್ರಮಾಣದ ಪೊಟಾಶಿಯಂ ಅಂಶವಿದ್ದು, ಆರೋಗ್ಯಕ್ಕೆ ಲಾಭಕಾರಿಯಾಗಿದೆ.

ಪೊಟಾಶಿಯಂ ರಕ್ತನಾಳಗಳನ್ನು ಅಗಲವಾಗಿಸುವುದು ಮತ್ತು ಇದರಿಂದ ರಕ್ತವು ಸರಾಗವಾಗಿ ಹರಿದುಹೋಗಲು ಸಹಕಾರಿ. ಇದರಿಂದ ರಕ್ತದೊತ್ತಡ ಕಡಿಮೆ ಆಗುತ್ತದೆ.

ಕ್ಯಾನ್ಸರ್ ಅಪಾಯ ದೂರ..
ಅವರೆ ಕಾಳನ್ನು ಸೇವನೆ ಮಾಡುವುದರಿಂದ ಇರುವ ಉಪಯೋಗಗಳಲ್ಲಿ ಕ್ಯಾನ್ಸರ್‌ ತಡೆಗೆ ಸಹಕಾರಿ ಆಗುವುದು ಸಹ ಒಂದು ಪ್ರಮುಖ ಅಂಶವಾಗಿದೆ.

Hyacinth bean ಅವರೆಕಾಳಿನಲ್ಲಿ ಸತುವಿನ ಅಂಶವು ಉತ್ತಮ ಪ್ರಮಾಣದಲ್ಲಿದೆ. ಸತು ಆಕ್ಸಿಡೇಟಿವ್ ಒತ್ತಡವನ್ನು ನಿವಾರಣೆ ಮಾಡುವುದರೊಂದಿಗೆ ಹಲವಾರು ರೀತಿಯ ಅನಾರೋಗ್ಯಗಳನ್ನು ಕಡಿಮೆ ಮಾಡಲು ಇದು ಸಹಕಾರಿ.

ತೂಕ ಇಳಿಸುವುದಕ್ಕೆ ಸಹಕಾರಿ..
ತೂಕ ಹೆಚ್ಚಾಗಿ ಇರುವವರು ಅವರೆಕಾಳನ್ನು ನಿಯಮಿತವಾಗಿ ಸೇವನೆ ಮಾಡುವುದು ಉತ್ತಮ. ಇದು ತೂಕ ಇಳಿಸಲು ಸಹಕಾರಿ. ಅಷ್ಟೇ ಅಲ್ಲದೇ ಸ್ನಾಯುಗಳನ್ನು ಬಲಪಡಿಸುವುದು ಜೊತೆಗೆ ಚಯಾಪಚಯವನ್ನು ವೃದ್ಧಿಸಲು ನೆರವಾಗುತ್ತದೆ.

ಮೂಳೆಗಳನ್ನು ಬಲಪಡಿಸುತ್ತದೆ..
ಅವರೆಕಾಳಿನಲ್ಲಿ ಕ್ಯಾಲ್ಸಿಯಂ calcium ಉತ್ತಮ ಪ್ರಮಾಣದಲ್ಲಿದೆ ಮತ್ತು ಇದು ಅಸ್ಥಿರಂಧ್ರತೆ ಸಮಸ್ಯೆಯ ವಿರುದ್ಧ ಹೋರಾಡಲು ತುಂಬಾ ಪರಿಣಾಮಕಾರಿ ಆಗಿದೆ.

ಅದೇ ರೀತಿಯಾಗಿ ಇದರಲ್ಲಿ ಇರುವ ಪೋಸ್ಪರಸ್ ಅಂಶ ಕೂಡ ಮೂಳೆಗಳಿಗೆ ಒಳ್ಳೆಯದು. ಪೋಸ್ಪರಸ್ ಕೂಡ ಮೂಳೆಗಳನ್ನು ಬಲಿಷ್ಠವಾಗಿಡುವುದಕ್ಕೆ ಬಳಸಬಹುದಾಗಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!