ಕೊಪ್ಪಳ : ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಯಡವಟ್ಟಿನ ಮೇಲೆ ಯಡವಟ್ಟಾಗುತ್ತಿದ್ದು, ರೋಗಿಗಳ ಬಗ್ಗೆ ಅಸಡ್ಡೆತನ ತೋರಿಸುತ್ತಿದ್ದಾರೆ ಇಲ್ಲಿನ ಸಿಬ್ಬಂಧಿಗಳು. ರಕ್ತ ತಪಾಸಣೆ ವೇಳೆ ಯಡವಟ್ಟು ಮಾಡಿ ಗರ್ಭಿಣಿಯನ್ನು ಖಾಸಗಿ ಆಸ್ಪತ್ರೆಗೆ ರವಾನಿಸಿ ಗರ್ಭಿಣಿ ಜೀವದ ಜೊತೆ ಜಿಲ್ಲಾಸ್ಪತ್ರೆ ಸಿಬ್ಬಂದಿ ಚೆಲ್ಲಾಟವಾಡಿದ್ದಾರೆ. ಮಹಿಳೆಯ ಬ್ಲಡ್ ಸ್ಯಾಂಪಲ್ AB+ ಎಂದು ಜಿಲ್ಲಾಸ್ಪತ್ರೆ ವರದಿ ನೀಡಿದೆ. ಆದರೆ ಬ್ಲಡ್ ಬ್ಯಾಂಕ್ ನಲ್ಲಿ AB+ ಗೂ ಮಹಿಳೆಯ ರಕ್ತಕ್ಕೂ ಸಂಬಂಧವಿಲ್ಲ ಎಂದು ಹೇಲಿದ್ದಾರೆ. ನಂತರ ಖಾಸಗಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿದಾಗ ಗರ್ಭಿಣಿ ಮಹಿಳೆ ರಕ್ತದ ಮಾದರಿ B+ ಎಂದು ವರದಿಯಾಗಿದ್ದು, ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ದ್ಯಾಮಾಪುರ ಗ್ರಾಮದ ಮಹಿಳೆ ರೇಣುಕಾ 8 ತಿಂಗಳ ಹಿಂದೆ ಕೂಡ ಈ ಮಹಿಳೆಗೆ AB+ ರಕ್ತ ಹಾಕಿದ ಮೇಲೆ ಮಹಿಳೆಯ ದೇಹದಲ್ಲಿ ರಕ್ತ ಹೆಪ್ಪುಗಟ್ಟಿದ್ದು, ನಂತರ ಜಿಲ್ಲಾಸ್ಪತ್ರೆಯ ವೈದ್ಯರು ಬೇರೆಡೆ ಕಳಿಸಿದ್ದರು.
ಬೇರೆ ಗುಂಪಿನ ರಕ್ತ ಹಾಕಿ ಮಹಿಳೆಯ ರಿಯಾಕ್ಷನ್ ಆಗಿತ್ತು ಎಂದು ಖಾಸಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ನಂತರ ರಿಯಾಕ್ಷನ್ ನಿಂದ ಗರ್ಭದಲ್ಲೆ ಮಗು ಸಾವು ಆಗಿದ್ದು, ಕೂದಲು ಉದುರಿ, ಮಹಿಳೆ ವಿರೂಪಗೊಂಡಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 2 ಲಕ್ಷ ಖರ್ಚು ಮಾಡಿ ಮಹಿಳೆಯನ್ನ ಬದುಕಿಸಿರುವ ತಾಯಿ ಸದ್ಯ ಮತ್ತೆ ಅದೇ ರೀತಿ, ನಿರ್ಲಕ್ಷ್ಯ ತೋರಿದ್ದಾರೆ ಆಸ್ಪತ್ರೆ ಸಿಬ್ಬಂದಿಯವರು. ಜಿಲ್ಲಾಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷಕ್ಕೆ ಬೇಸತ್ತಿರುವ ಮಹಿಳೆಯು ಸದ್ಯ ಗರ್ಭಿಣಿ ಮಹಿಳೆಯು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.