ಕೊರೊನಾ ಸೋಂಕಿತರಿಂದ ಮನ ಬಂದಂತೆ ವಸೂಲು ಮಾಡುತ್ತಿರುವ ಆಂಬುಲೆನ್ಸ್ ಗಳ ಹಣ ದಾಹಕ್ಕೆ ಕೊನೆಗೂ ರಾಜ್ಯ ಸರಕಾರ ಬ್ರೇಕ್ ಹಾಕಿದ್ದು, ದರ ನಿಗದಿಪಡಿಸಿ ಆದೇಶ ಹೊರಡಿಸಿದೆ.
ಆಂಬುಲೆನ್ಸ್ ಚಾಲಕರು ಮನಸ್ಸಿಗೆ ಬಂದಷ್ಟು ಹಣ ವಸೂಲಿ ಮಾಡುತ್ತಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ, ಶುಕ್ರವಾರ ಅಂಬುಲೆನ್ಸ್ ಗೆ ದರ ನಿಗದಿ ಮಾಡಿ ಆದೇಶ ಹೊರಡಿಸಿದೆ.
ಸಾರಿಗೆ ಸಚಿವ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ವೈದ್ಯಕೀಯ ಸಚಿವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಆಂಬುಲೆನ್ಸ್ ದರ ಹೀಗಿದೆ.
- ಮೊದಲ 10 ಕಿಲೋ ಮೀಟರ್ ಗೆ ಒಂದೂವರೆ ಸಾವಿರ ರೂ.
- 10 ಕಿ.ಮೀ. ನಂತರ ಕಿಲೋಮೀಟರ್ ಗೆ ಪ್ರತಿ ಕಿ.ಮೀ.ಗೆ 120 ರೂ.
- ವೈಯಿಟಿಂಗ್ ಚಾರ್ಜ್ ಪ್ರತಿ ಗಂಟೆಗೆ 200 ರೂ ನಿಗದಿ
- ಲೈಫ್ ಸಪೋರ್ಟ್ ಇರುವ ಆಂಬುಲೆನ್ಸ್ ಪ್ರತಿ 10 ಕಿ.ಮೀ.ವರೆಗೆ 2000 ರೂ.
- 10 ಕಿ.ಮೀ. ನಂತರ ಪ್ರತಿ ಕಿಲೋ ಮೀಟರ್ ಗೆ 120 ರೂ.
- ವೈಯಿಟಿಂಗ್ ಚಾರ್ಜ್ 250 ರೂ.