ಪಾನ್ ಮಸಾಲಾ ಬಹುಕೋಟಿ ಎಂಡಾರ್ಸ್ಮೆಂಟ್ ಡೀಲ್ ತಿರಸ್ಕರಿಸಿದ ರಾಕಿಂಗ್ ಸ್ಟಾರ್ !

ಕನ್ನಡ ನಟ ರಾಕಿಂಗ್ ಸ್ಟಾರ್ ಯಶ್ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ವಿಶ್ವದಾದ್ಯಂತ ನಟ ಯಶ್ ಅಭಿಮಾನಿ ಬಳಗ ದೊಡ್ಡದಿದೆ.

The writing in KGF Chapter 2 will be one of my best'- Cinema express

‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಸೂಪರ್ ಡ್ಯೂಪರ್ ಹಿಟ್ ಆಗಿದೆ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ನಟ ಯಶ್ ಈಗ ಬಹುಮುಖ್ಯ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಇದನ್ನೂ ಓದಿ :- 1000 ಕೋಟಿ ಕಲೆಕ್ಷನ್ ಮಾಡಿದ `ಕೆಜಿಎಫ್ 2
ಪಾನ್ ಮಸಾಲಾಗೆ ‘ನೋ’ ಎಂದ ಯಶ್!
ಪಾನ್ ಮಸಾಲಾ ಮತ್ತು ಏಲಕ್ಕಿ ಬ್ರಾಂಡ್ ನ ಬಹುಕೋಟಿ ಎಂಡಾರ್ಸೆಂಟ್ ಒಪ್ಪಂದವನ್ನು ರಾಕಿಂಗ್ ಸ್ಟಾರ್ ಯಶ್ ತಿರಸ್ಕರಿಸಿದ್ದಾರೆ. ಈ ಸುದ್ದಿಯನ್ನು ಯಶ್ ಎಂಡಾರ್ಸ್ಮೆಂಟ್ ಡೀಲ್ ಗಳನ್ನು ನಿರ್ವಹಿಸುವ ಸಂಸ್ಥೆ ಎಕ್ಸೀಡ್ ಎಂಟರ್ಟೇನ್ಮೆಂಟ್ ಖಚಿತ ಪಡಿಸಿದೆ.

KGF Chapter 2: Yash starrer creates history, becomes first Kannada film to  mint $1 million in USA

ನಟ ಯಶ್ ಅವರ ಎಂಡಾರ್ಸ್ಮೆಂಟ್ ಡೀಲ್ ಗಳನ್ನು ನಿರ್ವಹಿಸುವ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಏಜೆನ್ಸಿಯಾದ ಎಕ್ಸೀಡ್ ಎಂಟರ್ಟೇನ್ಮೆಂಟ್ ನ ಟ್ಯಾಲೆಂಟ್ ಮತ್ತು ನ್ಯೂ ವೆಂಚರ್ಸ್ ಮುಖ್ಯಸ್ಥ ಅರ್ಜುನ್ ಬ್ಯಾನರ್ಜಿ, ‘’ಪಾನ್ ಮಸಾಲಾಗಳು ಮತ್ತು ಅಂತಹ ಉತ್ಪನ್ನಗಳು ಜನರ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ಇದರಿಂದ ಜೀವಕ್ಕೆ ಅಪಾಯ ಉಂಟಾಗುತ್ತದೆ. ತಮ್ಮ ಅಭಿಮಾನಿಗಳ ಹಿತದೃಷ್ಟಿಯಿಂದ ವೈಯಕ್ತಿಕವಾಗಿ ಲಾಭದಾಯಕವಾದ ಒಪ್ಪಂದವನ್ನು ಯಶ್ ನಿರಾಕರಿಸಿದ್ದಾರೆ’’ ಎಂದು ತಿಳಿಸಿದ್ದಾರೆ.

 ಇದನ್ನೂ ಓದಿ :- ಕೆಜಿಎಫ್ -2 ನಟಿ ಅರ್ಚನಾ ಜೋಯಿಸ್ ಜೊತೆಗೆ ಸೆಲ್ಪಿಗೆ ಮುಗಿಬಿದ್ದ ಅಭಿಮಾನಿಗಳು

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!