ಮೇ 2ರಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರದ ರಾಜಕೀಯ ಪಕ್ಷಗಳ ಸಂಭ್ರಮಾಚರಣೆಗೆ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ.
ದೇಶದಲ್ಲಿ ಕೊರೊನಾ 2ನೇ ಅಲೆ ಅಬ್ಬರದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ವಿವರವಾದ ಆದೇಶವನ್ನು ಹೊರಡಿಸಿದ್ದು, ಮೇ 2ರಂದು ಚುನಾವಣಾ ಫಲಿತಾಂಶ ಹೊರಬಿದ್ದ ವೇಳೆ ಗೆದ್ದ ಅಭ್ಯರ್ಥಿ ಅವರ ಜೊತೆ ಒಬ್ಬರು ಮಾತ್ರ ಪ್ರಮಾಣ ಪತ್ರ ಸ್ವೀಕರಿಸಲು ಬರಬೇಕು ಎಂದು ತಿಳಿಸಿದೆ.