ರಾತ್ರಿ ಮದ್ಯ ಕೊಡದ ಹಿನ್ನೆಲೆಯಲ್ಲಿ ಡಾಬಾದ ಮೇಲೆ ಪುಂಡರು ಕಲ್ಲು, ಕಟ್ಟಿಗೆಗಳಿಂದ ದಾಳಿ ಮಾಡಿ ಹಾನಿ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿ-ವಿಜಯಪುರ ಹೆದ್ದಾರಿಯಲ್ಲಿರುವ ಬನಶ್ರೀ ಬಾರ್ & ರೆಸ್ಟೋರೆಂಟ್ ಡಾಬಾದ ಮೇಲೆ ಸುಮಾರು 8ರಿಂದ 10 ಜನರ ಗುಂಪು ದಾಳಿ ಮಾಡಿದ್ದೂ ಅಲ್ಲದೇ ಡಾಬಾದ ಸಿಬ್ಬಂದಿ ಮೇಲೂ ದಾಳಿಗೆ ಯತ್ನಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರಾತ್ರಿ ಕರ್ಫ್ಯೂ ಹಿನ್ನೆಲೆಯಲ್ಲಿ ರಾತ್ರಿ 9 ಗಂಟೆ ನಂತರ ಮದ್ಯ ಮಾರಾಟ ಮಾಡುವಂತಿಲ್ಲ. ಈ ಹಿನ್ನೆಲೆಯಲ್ಲಿ ಬಾರ್ ಮುಚ್ಚಿದ್ದರೂ ಸೋಮವಾರ ರಾತ್ರಿ 11 ಗಂಟೆಗೆ ಮದ್ಯ ಖರೀದಿಸಲು ಗುಂಪು ಬಂದಿತ್ತು.
ಬಾಗಿಲು ತೆಗೆದು ಮದ್ಯ ಕೋಡುವಂತೆ ಕಿಡಿಗೇಡಿಗಳು ದುಂಬಾಲು ಬಿದ್ದಿದ್ದು, ಮದ್ಯ ಕೊಡದಿದ್ದಕ್ಕೆ ಡಾಬಾ ಮೇಲೆ ಯುವಕರು ದಾಳಿ ಮಾಡಿದ್ದು, ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.
ಪುಂಡರ ಗುಂಪಿನಿಂದ ತಪ್ಪಿಸಿಕೊಳ್ಳಲು ಕೆಲಸಗಾರರು ಓಡಿ ಹೋಗಿದ್ದು, ಡಾಬಾ ಮಾಲೀಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೆರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.