ವಿವಾದಾತ್ಮಕ ಕೃಷಿ ಕಾನೂನು ರದ್ದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಬಿಜೆಪಿ ಮುಖಂಡರ ಕಾರಿನ ಮೇಲೆ ದಾಳಿ ನಡೆಸಿ ಹಾನಿ ಮಾಡಿದ್ದಕ್ಕಾಗಿ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ.
ಬಿಜೆಪಿ ಮತ್ತು ಜನನಾಯಕ್ ಜನತಾ ಪಾರ್ಟಿ ಸಮ್ಮಿಶ್ರ ಸರಕಾರ ಆಡಳಿತದಲ್ಲಿರುವ ಹರಿಯಾಣದ ಉಪ ಸಭಾಪತಿ ರಣಭೀರ್ ಗಂಗ್ವಾ ಅಧಿಕೃತ ಸರಕಾರಿ ಕಾರಿನ ಮೇಲೆ ದಾಳಿ ನಡೆಸಿದ್ದಾಗಿ 100ಕ್ಕೂ ಹೆಚ್ಚು ರೈತರ ಮೇಲೆ ಪ್ರಕರಣ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ.
ಜುಲೈ 11ರಿಂದ ಹರಿಯಾಣದ ಸಿರ್ಸಾ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಅದೇ ದಿನ ದೇಶದ್ರೋಹ ಅಲ್ಲದೇ ಕೊಲೆಯತ್ನ ಸೆಕ್ಷನ್ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹರಿಯಾಣ ಪೊಲೀಸರ ಕ್ರಮವನ್ನು ಸಂಯುಕ್ತ ರೈತ ಮೋರ್ಚಾ ಸಂಘಟನೆ ಖಂಡಿಸಿದ್ದು, ರೈತರ ವಿರುದ್ಧ ಪೊಲೀಸರು ಸುಳ್ಳು ಹಾಗೂ ದ್ವೇಷಪೂರಿತ ಪ್ರಕರಣ ದಾಖಿಲಿಸುತ್ತಿದ್ದಾರೆ. ಇದು ನ್ಯಾಯಾಂಗ ನಿಂದನೆ ಕೂಡ ಹೌದು ಎಂದು ಆರೋಪಿಸಿದ್ದಾರೆ.