ದೇಶದಲ್ಲಿ ಒಂದೇ ದಿನದಲ್ಲಿ 1.52 ಲಕ್ಷ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, 839 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1.33ಕೋಟಿಗೆ ಏರಿಕೆಯಾದರೆ, ಸಾವಿನ ಸಂಖ್ಯೆ 1,69,275ಕ್ಕೆ ಜಿಗಿತ ಕಂಡಿದೆ.
ಕೇವಲ ಆರೂವರೆ ತಿಂಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತೆ 10 ಲಕ್ಷ ಗಡಿ ದಾಟಿದೆ. ಅಲ್ಲದೇ ಕಳೆದ ವರ್ಷ ಅಕ್ಟೋಬರ್ ನಂತರ 800ಕ್ಕಿಂತ ಅಧಿಕ ಮಂದಿ ಒಂದೇ ದಿನ ಮೃತಪಟ್ಟಿದ್ದಾರೆ.
ಒಂದೇ ದಿನ 1,52,879 ಸೋಂಕು ಪ್ರಕರಣಗಳು ವರದಿಯಾದರೆ, 90,584 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 1,33,58,805ಕ್ಕೆ ಜಿಗಿತ ಕಂಡಿದೆ.