ರಾಜ್ಯದಲ್ಲಿ ಆಕ್ಸಿಜನ್ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 20 ಮೊಬೈಲ್ ಆಕ್ಸಿಜನ್ ಬಸ್ ಗಳನ್ನು ಸಿದ್ಧಪಡಿಸಿದೆ.
ಆಸ್ಪತ್ರೆಗಳಲ್ಲಿ ಬೆಡ್ ಕೊರತೆ, ಬೆಡ್ ಬ್ಲಾಕಿಂಗ್ ಭ್ರಷ್ಟಾಚಾರ, ಮತ್ತು ಐಸಿಯು ದೊರೆಯದೇ ಸೋಂಕಿತರ ಸಾವು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಈ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.
ಬಿಬಿಎಂಪಿ ಸಿದ್ಧಪಡಿಸಿರುವ 20 ಮೊಬೈಲ್ ಆಕ್ಸಿ ಬಸ್ ಗಳು ರಸ್ತೆಗಿಳಿಯಲು ಸಜ್ಜಾಗಿದ್ದು, ಪ್ರತಿಯೊಂದು ಬಸ್ ನಲ್ಲಿ 8 ಸೋಂಕಿತರಿಗೆ ಒಂದೇ ಬಾರಿ ಆಕ್ಸಿಜನ್ ಕೊಡಬಹುದಾಗಿದೆ. ಒಂದು ಬಸ್ ನಲ್ಲಿ 8 ಆಕ್ಸಿಜನ್ ಸಿಲಿಂಡರ್ ಸಿದ್ಧಗೊಂಡಿದ್ದು, ಒಂದು ದಿನಕ್ಕಾಗುವಷ್ಟು ಸಂಗ್ರಹವಿರುತ್ತದೆ.
ಟ್ರಾಸ್ ಎನರ್ಜಿ ಮಾಚನಿ ಗ್ರೂಪ್ ಈ ಬಸ್ ಗಳನ್ನು ಸಿದ್ಧಪಡಿಸಿದ್ದು, 2 ದಿನದಲ್ಲಿ ಬಸ್ ಸಂಪೂರ್ಣವಾಗಿ ಸಿದ್ಧಗೊಂಡು ರಸ್ತೆಗಿಳಿಯಲಿವೆ.
ಪ್ರತಿ ಸೀಟಿಗೂ ಆಕ್ಸಿಜನ್ ಪೂರೈಕೆ ವ್ಯವಸ್ಥೆ ಮಾಡಲಾಗಿದ್ದು, ಬಿಬಿಎಂಪಿ ಬಸ್ ಮೂಮೆಂಟ್ ಮೇಲೆ ಗಮನ ಹರಿಸಲಿದೆ.