ಪಂಚಮಸಾಲಿಗೆ 2A ಮೀಸಲಾತಿಗಾಗಿ ಕಳೆದ 15 ತಿಂಗಳಿಂದ ನಿರಂತರ ಹೋರಾಟ ಮಾಡುತ್ತಿದ್ದೇವೆ. ಬಜೆಟ್ ಅಧಿವೇಶನ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಭರವಸೆ ನೀಡಿದರು. ಆದರೆ ಇದುವರೆಗೂ ನಮ್ಮ ಹಕ್ಕೊತ್ತಯ ಈಡೇರಿಲ್ಲ ಎಂದು ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ (JAYAMRUTHYNJAYA SWAMIJI) ಸ್ವಾಮೀಜಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾತನಾಡಿದ ಅವರು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿಗಳೇ ನಮ್ಮ ಸಭೆಗೆ ಬಂದು ಭರವಸೆ ನೀಡಿದರು. ಹಾಗಾಗಿ ರಾಜ್ಯಾದ್ಯಂತ ತಾಲೂಕು ಮಟ್ಟದಲ್ಲಿ ಬಳೆಕ ಜಿಲ್ಲಾ ಮಟ್ಟದಲ್ಲಿ ಸತ್ಯಾಗ್ರಹಕ್ಕೆ ನಿರ್ಧಾರ ಮಾಡಿದ್ದೇವೆ. ಆಗಲೂ ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದರೆ ಮುಖ್ಯಮಂತ್ರಿಗಳ ಮನೆಯ ಮುಂದೆ ಧರಣಿ ಸತ್ಯಾಗ್ರಹ ಮಾಡುತ್ತೇವೆ. ನಮಗೆ ಮೀಸಲಾತಿ ನೀಡಿವುದರಿಂದ ನಿಮಗೇನಾದರೂ ಸಮಸ್ಯೆ ಇದ್ರೆ ಹೇಳಿ. ಬೇರೆ ಯಾರಾದರೂ ನಮಗೆ ಮೀಸಲಾತಿ ನೀಡಬೇಡಿ ಅಂತ ಹೇಳಿದ್ದಾರರೆ ಅದನ್ನ ಸ್ಪಷ್ಟ ಪಡಿಸಿ. ಇದುವರೆಗೂ ಆಯೋಗದ ವರದಿ ಬಂದಿಲ್ಲ ಆಯೋಗದ ವರದಿ ಬಂದ ಬಳಿಕ, ವಿಳಂಬ ಮಾಡಿದ್ರೆ ಉಗ್ರ ಹೋರಾಟ ಮಾಡುತ್ತೇವೆ. ಇದನ್ನೂ ಓದಿ : – ಕಾಂಗ್ರೆಸ್ ನವರಿಗೆ ಪಕ್ಷ ಕಟ್ಟಲು ಗೊತ್ತಿಲ್ಲ..ಇನ್ನು ನಾಡನ್ನು ಏನ್ ಕಟ್ತಾರೆ? – ನಳೀನ್ ಕುಮಾರ್ ಕಟೀಲ್
ಕ್ರಾಂತಿ ಮಾಡುವ ಮೊದಲೇ ನಮಗೆ ಮೀಸಲಾತಿ ನೀಡಿ. ನಾನು ಯಾವುದೆ ಪಕ್ಷದ ಕುರಿತು ಜಾಸ್ತಿ ಹೇಳಿಲ್ಲಾ. ಚುನಾವಣೆ ನಮ್ಮ ಹೋರಾಟದಿಂದ ಸಮಸ್ಯೆ ಆಗುತ್ತೆ ಅನ್ನೋದನ್ನ ನಾನು ತಳಕು ಹಾಕಲ್ಲಾ. ಹೋರಾಟವೆ ಬೇರೆ ಚುನಾವಣೆ ರಾಜಕೀಯವೆ ಬೇರೆ. ಪಂಚಮಸಾಲಿ ಮೀಸಲಾತಿ ವಿಳಂಬ ಮಾಡಿದ್ರೆ ತೊಂದರೆ ಆಗುತ್ತದೆ ಅನ್ನೋದು ಬಿಜೆಪಿ ಹೈಕಾಮಾಂಡ ಗೋತ್ತಿದೆ ಹಾಗಾಗಿ ಎಚ್ಚೆತ್ತುಕೊಳ್ಳಿಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ : – ಬಿಜೆಪಿಯ MLAಗಳು ಜೈಲಿಗೆ ಏಕೆ ಹೋಗಿದ್ರು- ಕಟೀಲ್ಗೆ ಡಿಕೆಶಿ ಪ್ರಶ್ನೆ