ಇಂದಿನಿಂದ ಉದಯಪುರದಲ್ಲಿ 3 ದಿನ ನವ ಸಂಕಲ್ಪ ಶಿಬಿರ ಆರಂಭವಾಗಲಿದೆ. ದೇಶದ ವಿವಿಧ ಭಾಗಗಳಿಂದ ಕಾಂಗ್ರೆಸ್ ಮುಖಂಡರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾಂಗ್ರೆಸ್ ಶಿಬಿರ ಹಿನ್ನೆಲೆಯಲ್ಲಿ ನಗರೆದೆಲ್ಲೆಡೆ ಕಾಂಗ್ರೆಸ್ ಧ್ವಜಗಳು, ಬ್ಯಾನರ್ ಗಳು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಭಾವಚಿತ್ರಗಳು ರಾರಾಜಿಸುತ್ತಿವೆ. ಪ್ರವಾಸಿ ನಗರದಲ್ಲಿ ಕಾಂಗ್ರೆಸ್ ಮುಖಂಡರ ಬೃಹತ್ ಹೋರ್ಡಿಂಗ್ಸ್ ಗಳು, ಫ್ಲೆಕ್ಸ್ ಗಳು ಕಂಡುಬರುತ್ತಿವೆ. ಬುಧವಾರ ಸಂಜೆ ಶಿಬಿರ ನಡೆಯಲಿರುವ ತಾಜ್ ಅರವಲ್ಲಿಗೆ ತೆರಳಿದ್ದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪೂರ್ವಭಾವಿ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದ್ದರು. ಇದನ್ನೂ ಓದಿ : –ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಸಚಿವ ಸಂಪುಟ ಒಪ್ಪಿಗೆ
ಮಧ್ಯಾಹ್ನ 12 ಗಂಟೆಗೆ ನವ ಸಂಕಲ್ಪ ಶಿಬಿರ ಆರಂಭವಾಗಲಿದ್ದು, ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಆರು ಸಮಿತಿಗಳ ಸಮನ್ವಯಕಾರರ ಸಭೆ ನಡೆಯಲಿದೆ. ನಾಳೆ ಸಮಿತಿ ಚರ್ಚೆ ನಡೆಯಲಿದ್ದು, ರಾತ್ರಿ 8 ಗಂಟೆಯವರೆಗೂ ಗುಂಪು ಚರ್ಚೆ ನಡೆಯಲಿದೆ.
ಇದನ್ನೂ ಓದಿ : – ಮುಳುಗುವ ಹಡಗು ಕಾಂಗ್ರೆಸ್ ಗೆ ಡಿಕೆಶಿ ಕ್ಯಾಪ್ಟನ್ – ರೇಣುಕಾರ್ಚಾಯ ವ್ಯಂಗ್ಯ