ಕಳದೆರಡು ದಿನಗಳಿಂದ ಇಳಿಕೆ ಕಂಡು ಬಂದಿದ್ದ ಕೊರೊನಾ ಸೋಂಕು ಮತ್ತು ಮರಣ ಪ್ರಮಾಣದ ರಾಜ್ಯದಲ್ಲಿ ಮತ್ತೆ ಜಿಗಿತ ಕಂಡಿದೆ. ಕಳೆದ 24 ಗಂಟೆಗಳಲ್ಲಿ 39,998 ಸೋಂಕು ಪ್ರಕರಣಗಳು ವರದಿಯಾದರೆ, 517 ಮಂದಿ ಅಸುನೀಗಿದ್ದಾರೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬುಧವಾರ ನೀಡಿದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 2,053,191ಕ್ಕೆ ಏರಿಕೆಯಾದರೆ, ಸಾವಿನ ಸಂಖ್ಯೆ 20 ಸಾವಿರ ಗಡಿ (20,368) ದಾಟಿದೆ.
ಕಳೆದ ಒಂದು ದಿನದಲ್ಲಿ 34,762 ಮಂದಿ ಗುಣಮುಖಿತರಾಗಿದ್ದು, ಒಟ್ಟಾರೆ ಗುಣಮುಖಿತರ ಸಂಖ್ಯೆ 1,44,0621ಕ್ಕೆ ತಲುಪಿದೆ. ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 5,92,182ಕ್ಕೆ ಜಿಗಿತ ಕಂಡಿದೆ.
ಬೆಂಗಳೂರಿನಲ್ಲಿ 16,286 ಹೊಸದಾಗಿ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, 275 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಒಂದು ದಿನದಲ್ಲಿ 18,089 ಮಂದಿ ಗುಣಮುಖಿತರಾಗಿದ್ದು, 3,60619 ಸಕ್ರಿಯ ಪ್ರಕರಣಗಳಿವೆ.