ಸಂಘಟಿತ ಪ್ರದರ್ಶನ ನೀಡಿದ ಭಾರತ ವನಿತೆಯರ ತಂಡ 2 ವಿಕೆಟ್ ಗಳಿಂದ ಆಸ್ಟ್ರೇಲಿಯಾ ತಂಡವನ್ನು ಬಗ್ಗುಬಡಿದು ಏಕದಿನ ಕ್ರಿಕೆಟ್ ನಲ್ಲಿ ಸತತ 26 ಗೆಲುವಿನ ದಾಖಲೆಯ ಕೊಂಡಿಯನ್ನು ಕಳಚಿ ಹಾಕಿದೆ.
ಮೈಕೆಯಲ್ಲಿ ಭಾನುವಾರ ನಡೆದ 3ನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವನ್ನು 9 ವಿಕೆಟ್ ಗೆ 269 ರನ್ ಗಳಿಗೆ ನಿಯಂತ್ರಿಸಿದ ಭಾರತ 3 ಎಸೆತಗಳು ಬಾಕಿ ಇರುವಂತೆಯೇ 8 ವಿಕೆಟ್ ಕಳೆದುಕೊಂಡು ರೋಚಕ ಜಯಭೇರಿ ಬಾರಿಸಿತು.
ಕಠಿಣ ಗುರಿ ಬೆಂಬತ್ತಿದ ಭಾರತ ತಂಡಕ್ಕೆ ಶೆಫಾಲಿ ವರ್ಮಾ ಮತ್ತು ಸ್ಮೃತಿ ಮಂದಾನ (22) 59 ರನ್ ಜೊತೆಯಾಟದ ಮೂಲಕ ಉತ್ತಮ ಆರಂಭ ಒದಗಿಸಿದರು. ನಂತರ ಶೆಫಾಲಿ ಮತ್ತು ಯಶ್ತಿಕ ಭಾಟಿಯಾ 2ನೇ ವಿಕೆಟ್ ಗೆ 2ನೇ ವಿಕೆಟ್ ಗೆ 101 ರನ್ ಪೇರಿಸಿ ತಂಡವನ್ನು ಆಧರಿಸಿದರು.
ಶೆಫಾಲಿ 91 ಎಸೆತಗಳಲ್ಲಿ 7 ಬೌಂಡರಿ ಸೇರಿದ 56 ರನ್ ಬಾರಿಸಿ ನಿರ್ಗಮಿಸಿದರೆ, ಯಶ್ತಿಕಾ ಭಾಟಿಯಾ 69 ಎಸೆತಗಳಲ್ಲಿ 9 ಬೌಂಡರಿ ಒಳಗೊಂಡ 64 ರನ್ ಸಿಡಿಸಿದರು. ಆದರೆ ಇಬ್ಬರಿಬ್ಬರು ಪತನಗೊಳ್ಳುತ್ತಿದ್ದಂತೆ ತಂಡ ನಾಟಕೀಯ ಕುಸಿತಕ್ಕೆ ಒಳಗಾಯಿತು.
ಆದರೆ ಕೆಳ ಕ್ರಮಾಂಕದಲ್ಲಿ ದೀಪ್ತಿ ಶರ್ಮ (31) ಮತ್ತು ಸ್ನೇಹಾ ರಾಣ (30) ತಂಡವನ್ನು ಆಧರಿಸಿ ಗೆಲುವಿನ ಹಾದಿ ಸುಗಮಗೊಳಿಸಿದರು. ಆಸ್ಟ್ರೇಲಿಯಾ ಪರ ಅನ್ನಾಬೆಲ್ 3 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಆಶಿಘಡ್ ಗಾರ್ಡನರ್ (67), ಬೆರ್ತ ಮೂನಿ (52), ಅಲ್ಯಾಸ ಹೇಲಿ (35) ಟಹಿಲಾ ಮೆಗ್ರಾಥ್ (47) ತಂಡದ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಭಾರತದ ಪರ ಪೂಜಾ ವಸ್ರಾಕರ್ ಮತ್ತು ಜೂಲನ್ ಗೋಸ್ವಾಮಿ ತಲಾ 3 ವಿಕೆಟ್ ಗಳಿಸಿದರು.