5G SPECTRUM – ದೇಶದಲ್ಲಿ ಇನ್ಮುಂದೆ ಸಿಗಲಿದೆ 5G ಇಂಟರ್ನೆಟ್ ಸೇವೆ

ಬಹು ನಿರೀಕ್ಷಿತ 5G ತರಂಗಾಂತರ ಹರಾಜಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದೇ ಜುಲೈ ಅಂತ್ಯಕ್ಕೆ ಹರಾಜು ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ. ಭಾರತವು ಶೀಘ್ರದಲ್ಲೇ 4 ಜಿ ಪ್ರಪಂಚದಿಂದ 5ಜಿ ಪ್ರಪಂಚಕ್ಕೆ ಶಿಫ್ಟ್ ಆಗಲಿದ್ದು, 5G ಸೇವೆಗಳ ತರಂಗಾಂತರ ಹರಾಜು ಪ್ರಕ್ರಿಯೆ ಜುಲೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ದೂರಸಂಪರ್ಕ ಇಲಾಖೆಯ 5G ತರಂಗಾಂತರ ಹರಾಜನ್ನು ಅನುಮೋದಿಸಿದೆ.

ಈ ಮೂಲಕ ಸಾರ್ವಜನಿಕರಿಗೆ ಮತ್ತು ಉದ್ಯಮಗಳಿಗೆ 5G ಸೇವೆಗಳನ್ನು ಒದಗಿಸಲು ಬಿಡ್ ದಾರರಿಗೆ ಸ್ಪೆಕ್ಟ್ರಮ್ ನಿಯೋಜಿಸಲಾಗುವುದು. 5G ನೆಟ್ವರ್ಕ್ ವೇಗ ಮತ್ತು ಸಾಮರ್ಥ್ಯವು ಪ್ರಸ್ತುತ 4G ಸೇವೆಗಳಿಗಿಂತ 10 ಪಟ್ಟು ಹೆಚ್ಚಿನದಾಗಿರುತ್ತದೆ ಎಂದು ಸಂಪುಟ ಹೇಳಿದೆ. ಜುಲೈ ಅಂತ್ಯದ ವೇಳೆಗೆ 20 ವರ್ಷಗಳ ಮಾನ್ಯತೆಯೊಂದಿಗೆ 72097.85 MHz ಸ್ಪೆಕ್ಟ್ರಮ್ ನ ಒಟ್ಟು ಹರಾಜಿಗೆ ಹಾಕಲಾಗುತ್ತದೆ. ಇದು ಜುಲೈ 2022 ರ ಅಂತ್ಯದ ವೇಳೆಗೆ ನಡೆಯುವ ಸಾಧ್ಯತೆ ಇದೆ. ಪಿಐಬಿ ಅಧಿಕೃತವಾಗಿ 600 MHz, 700 MHz, 800 MHz, 900 MHz, 1800 MHz, 2100 MHz, 2300 MHz), ಮಧ್ಯಮ (3300 MHz) ಮತ್ತು ಹೈ (2600 MHz) ಸ್ಪೆಕ್ಟ್ರಮ್‌ ಗಾಗಿ ಹರಾಜು ನಡೆಸಲಿದೆ.

ಇದನ್ನೂ ಓದಿ : – ರೂಪಾ ಮೌದ್ಗಿಲ್ ವಿರುದ್ಧ ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ರದ್ದುಗೊಳಿಸಿದ ಹೈಕೋರ್ಟ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!