ಬಿಹಾರ : ಪ್ರಯಾಣಿಕರ ಪಿಕ್ಅಪ್ ಜೀಪೊಂದು ಗಂಗಾ ನದಿಗೆ ಉರುಳಿಬಿದ್ದ ಪರಿಣಾಮ 9 ಮಂದಿ ಸಾವನ್ನಪ್ಪಿರುವ ಘಟನೆ ಬಿಹಾರದ ಪಾಟ್ನಾದಲ್ಲಿನ ಪೀಪಾಪುಲ್ ಎಂಬಲ್ಲಿ ನಡೆದಿದೆ.
15 ಜನ ಪ್ರಯಾಣಿಕರಿದ್ದ ಜೀಪ್ ಪೀಪಾ ಸೇತುವೆ ಮೇಲೆ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಬ್ರಿಡ್ಜ್ ನ ರೇಲಿಂಗ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರೇಲಿಂಗ್ ಮುರಿದು ಜೀಪ್ ನದಿಗೆ ಉರುಳಿದೆ. ಘಟನೆಯಲ್ಲಿ 9 ಮಂದಿ ಪ್ರಯಾಣಿಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಚಿತ್ರಕೂಟ ನಗರದಲ್ಲಿ ನಡೆದ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಅಖಿಪುರಕ್ಕೆ ವಾಪಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮೂರು ಜನರು ಈಜಿ ಪಾರಾಗಿದ್ದಾರೆ.
ಸ್ಥಳಕ್ಕೆ ರಕ್ಷಣಾ ಸಿಬ್ಬಂದಿಗಳು, ಪೊಲೀಸರು ದೌಡಾಯಿಸಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.