ಯುರೋಪ್, ಅಮೆರಿಕ ದೇಶಗಳಲ್ಲಿ ಗಣನೀಯವಾಗಿ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಕೋವಿಡ್-19 ನಾಲ್ಕನೇ ಅಲೆಯ ಭೀತಿಯಲ್ಲಿರುವ ಭಾರತಕ್ಕೂ ಇದರ ಆತಂಕ ಶುರುವಾಗಿದೆ.
ಕಳೆದ 10 ದಿನಗಳಲ್ಲಿ ಸ್ಥಳೀಯವಲ್ಲದ 12 ದೇಶಗಳಲ್ಲಿ 92 ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದೆ. ಶಂಕಿತ ಪ್ರಕರಣಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದಿರುವ ವಿಶ್ವ ಆರೋಗ್ಯ ಸಂಸ್ಥೆ, ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಮಂಕಿಪಾಕ್ಸ್ ಸಾಮಾನ್ಯವಾಗಿ ಸೌಮ್ಯ ಸ್ವಭಾವದ್ದಾಗಿರುವುದರಿಂದ ಹೆಚ್ಚಿನ ಜನರು ಕೆಲ ವಾರಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ಇದನ್ನೂ ಓದಿ : – ಅಬಕಾರಿ ಸುಂಕ ಇಳಿಸಿದ ಕೇಂದ್ರ ಸರ್ಕಾರ- ಪೆಟ್ರೋಲ್ ಬೆಲೆ 9.5ರೂ, ಡೀಸೆಲ್ ದರ 7 ರೂ ಇಳಿಕೆ
ಜನರ ನಡುವೆ ವೈರಸ್ ಅಷ್ಟು ಸುಲಭವಾಗಿ ಹರಡುವುದಿಲ್ಲ. ಹೀಗಾಗಿ ಸಾರ್ವಜನಿಕರಲ್ಲಿ ವ್ಯಾಪಕವಾಗಿ ಹರಡುವ ಅಪಾಯ ಬಹಳ ಕಡಿಮೆ ಎಂದು ವರದಿ ಹೇಳಿದೆ. ಮಂಕಿಪಾಕ್ಸ್ ವೈರಸ್ಗೆ ನಿರ್ದಿಷ್ಟ ಲಸಿಕೆ ಇಲ್ಲ. ಆದರೆ ಸ್ಮಾಲ್ಪಾಕ್ಸ್ಗೆ ಬಳಸುವ ಲಸಿಕೆಯು ಶೇ.85 ರಷ್ಟು ರಕ್ಷಣೆ ನೀಡುತ್ತದೆ. ಈ ಎರಡೂ ವೈರಸ್ಗಳ ಮಧ್ಯೆ ಬಹಳ ಸಾಮ್ಯತೆ ಇದೆ. ಇಲ್ಲಿಯವರೆಗೆ, ವೈರಸ್ ಹೆಚ್ಚಾಗಿ ಆಫ್ರಿಕಾಕ್ಕೆ ಸೀಮಿತವಾಗಿತ್ತು.
ಈಗ ಯುರೋಪ್ನ ಬ್ರಿಟನ್, ಸ್ಪೇನ್, ಪೋರ್ಚುಗಲ್, ಜರ್ಮನಿ, ಬೆಲ್ಜಿಯಂ, ಫ್ರಾನ್ಸ್, ನೆದರ್ಲ್ಯಾಂಡ್ಸ್, ಇಟಲಿ ಮತ್ತು ಸ್ವೀಡನ್ಗಳಲ್ಲಿ ಖಚಿತವಾಗಿದೆ. ಮಂಕಿಪಾಕ್ಸ್ ಸೋಂಕು ಗಾಳಿಯಲ್ಲಿ ಹರಡುವುದಿಲ್ಲ. ಇದಕ್ಕೆ ವೈಜ್ಞಾನಿಕ ಆಧಾರವೂ ಇಲ್ಲ. ಅಲ್ಲದೆ ಲೈಂಗಿಕ ಸಂಪರ್ಕ ಇದ್ದವರಲ್ಲೂ ಪತ್ತೆಯಾಗುತ್ತದೆ ಎನ್ನುವ ಬಗ್ಗೆ ಮಾಹಿತಿಯಿಲ್ಲ. ಆದರೆ ಗಾಯಗಳು, ದೇಹದಿಂದ ಹೊರಬರುವ ದ್ರವಾಂಶ, ಉಸಿರಾಟ ಹಾಗೂ ಕಲುಷಿತ ವಸ್ತುಗಳೊಂದಿಗೆ ನಿಕಟ ಸಂಪರ್ಕದಿಂದ ವೈರಸ್ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಇದನ್ನೂ ಓದಿ : – JAMMU TUNNEL COLLAPSE – ಜಮ್ಮು ರಾಷ್ಟ್ರೀಯ ಹೆದ್ದಾರಿ ಸುರಂಗ ಕುಸಿತದಲ್ಲಿ ಐವರು ದುರ್ಮರಣ- ನಾಪತ್ತೆಯಾದವರಿಗಾಗಿ ಶೋಧ