ವರನಟ ಡಾ.ರಾಜ್ ಕುಮಾರ್ ತಮ್ಮ ಜೀವನದ ಕೊನೆಯ ದಿನಗಳಲ್ಲೂ ಸಹ ತಮ್ಮಿಂದ ಜನರಿಗೆ ಉಪಯೋಗವಾಗಬೇಕು ಅನ್ನುವ ಕಾರಣದಿಂದ ನೇತ್ರದಾನ ಮಹಾದಾನ ಅಂತಾ ತಮ್ಮ ಕಣ್ಣುಗಳನ್ನ ಸಹ ದಾನ ಮಾಡಿ ಆದರ್ಶ ಮೆರೆದಿದ್ದರು.
ಈ ಕಾರ್ಯದಿಂದ ಪ್ರೇರಿತರಾದ ಅದೇಷ್ಟೋ ಅಸಂಖ್ಯಾತ ಅಭಿಮಾನಿಗಳು ನೇತ್ರದಾನವನ್ನ ಮಾಡಿದ್ದರು. ಈಗಲೂ ಸಹ ಮಾಡ್ತಾನೆ ಇದ್ದಾರೆ. ಅದೇ ಹಾದಿಯನ್ನ ಅನುಸರಿಸಿದ ಡಾ.ರಾಜ್ ಪುತ್ರ ಶಿವರಾಜ್ ಕುಮಾರ್ ನೇತ್ರದಾನಕ್ಕೆ ಮುಂದಾಗಿದ್ದಾರೆ. 2006ರಲ್ಲಿ ವರನಟ ಡಾ.ರಾಜ್ ಕುಮಾರ್ ಮರಣದ ನಂತರ ಅವರ ಕಣ್ಣುಗಳನ್ನ ನಾರಾಯಣ ನೇತ್ರಾಲಯದಲ್ಲಿ ದಾನ ಮಾಡಲಾಗಿತ್ತು. ಅದೇ ನೇತ್ರಾಲಯಕ್ಕೆ ಇದೀಗ ಶಿವಣ್ಣ ಕೂಡಾ ತಮ್ಮ ಮರಣದ ನಂತರ ನೇತ್ರದಾನ ಮಾಡಲು ನಿರ್ಧರಿಸಿದ್ದಾರೆ.
ಬೇಡರ ಕಣ್ಣಪ್ಪ ಸಿನಿಮಾದಲ್ಲಿ ಅಣ್ಣಾವ್ರು ಶಿವನಿಗೆ ಕಣ್ಣು ಕೊಟ್ಟರು. ಶಿವ ಮೆಚ್ಚಿದ ಕಣ್ಣಪ್ಪ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಶಿವನಿಗೆ ಕಣ್ಣು ಕೊಟ್ಟರು. ರೀಲ್ ನಲ್ಲಿ ನೇತ್ರದಾನ ಮಾಡಿದ ನಟ, ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಡಾ.ರಾಜ್ ಕುಮಾರ್ ತಮ್ಮ ಮರಣದ ನಂತರ ನೇತ್ರದಾನ ಮಾಡುವ ಮೂಲಕ ಅಸಂಖ್ಯಾತ ಅಭಿಮಾನಿಗಳಿಗೆ ಮಾದರಿಯಾದರು ಇದೀಗ ಶಿವಣ್ಣ ತಮ್ಮ ನೆಚ್ಚಿನ ಅಭಿಮಾನಿಗಳಿಗೋಸ್ಕರ, ಕರುನಾಡಿನ ಕೋಟಿ ಕೋಟಿ ಜನರಿಗೋಸ್ಕರ ತಮ್ಮ ಕಣ್ಣುಗಳನ್ನ ದಾನ ಮಾಡ್ತಿದ್ದಾರೆ.
ಶಿವಣ್ಣನ ಈ ನಿರ್ಧಾರದಿಂದ, ತಮ್ಮ ಸಾಮಾಜಿಕ ಕಳಕಳಿಯಿಂದ ಅಭಿಮಾನಿಗಳ ಹೃದಯದಲ್ಲಿ ದೊಡ್ಡ ಜಾಗ ಮಾಡಿಕೊಂಡಿತ್ತಾರೆ. ಈ ನೇತ್ರದಾನ ಮಹಾದಾನ ಕಾರ್ಯ ಶಿವಣ್ಣನ ಸಹಸ್ರಾರು ಅಭಿಮಾನಿಗಳಿಗೆ, ಕನ್ನಡದ ಕುಲಕೋಟಿ ಜನರಿಗೆ ಮಾದರಿಯಾಗಿದೆ.