ಬಿಗ್ ಬಾಸ್ ಖ್ಯಾತಿಯ ನಟಿ, ನಿರ್ದೇಶಕಿ, ಬರಹಗಾರ್ತಿ ಚೈತ್ರಾ ಕೊಟ್ಟೂರು ಮಂಡ್ಯದ ಜಿ.ಎಸ್.ನಾಗ ಅರ್ಜುನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಬೆಂಗಳೂರಿನ ಗಣಪತಿ ದೇವಸ್ಥಾನದಲ್ಲಿ ಭಾನುವಾರ ಚೈತ್ರ ಹಾಗೂ ನಾಗ ಅರ್ಜುನ ಜೋಡಿ ಸರಳವಾಗಿ ವಿವಾಹವಾದರು.
ಅಖಂಡ ಕರ್ನಾಟಕ ರಕ್ಷಣಾ ಸೇವಾದಳ ರಾಜ್ಯಾಧ್ಯಕ್ಷ ಸಿಂಹ ಶಿವುಗೌಡ, ಶೈಲೇಂದ್ರ ಕುಮಾರ್ ಹಾಗೂ ಇತರರು ವಿವಾಹಕ್ಕೆ ಸಾಕ್ಷಿಯಾದರು.