ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸುತ್ತಿದ್ದಂತೆ ರಾಜ್ಯದಲ್ಲಿ ಬಿಜೆಪಿ ಸರಕಾರ ಪತನಗೊಳ್ಳಲಿದೆ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಭವಿಷ್ಯ ನುಡಿದಿದ್ದಾರೆ.
ಮಸ್ಕಿ ವಿಧಾನಸಭಾ ಉಪ ಚುನಾವಣೆಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಗಳು ಬರುತ್ತಾರೆ. ಹೋಗುತ್ತವೆ. ಆದರೆ ಈ ಬಾರಿ ಚುನಾವಣೆ ಮುಗಿದ ಬೆನ್ನಲ್ಲೇ ಬಿಜೆಪಿ ಸರಕಾರ ಪತನಗೊಳ್ಳಲಿದೆ ಎಂದರು.
2008 ರಲ್ಲಿ ನಾನು ಕೆಪಿಸಿಸಿ ಅಧ್ಯಕ್ಷ ಆಗಿದ್ದೆ. ಆಗ ನಮಗೂ ಮ್ಯಾಜಿಕ್ ನಂಬರ್ ಇರಲಿಲ್ಲ. ಬಿಜೆಪಿಯವರಿಗೂ ನಂಬರ್ ಇರಲಿಲ್ಲ. ನಮ್ಮ ಬಳಿ ಹಣವಿರಲಿಲ್ಲ. ರೆಡ್ಡಿ ಸೋದರರು ಜೆಡಿಎಸ್ ಶಾಸಕರನ್ನು ಕರೆಕೊಂಡು ಹೋಗಿ ಗೋವಾದಲ್ಲಿ ಇರಿಸಿದರು. ಬೆಳಗಾವಿ, ಮಸ್ಕಿ, ಬಸವಕಲ್ಯಾಣದಲ್ಲಿ ನಾವು ಗೆದ್ದೆ ಗೆಲ್ಲುತ್ತೇವೆ. ನಾವು ಗೆದ್ದ ಮಾರನೇ ದಿನವೇ ಸರ್ಕಾರ ಬೀಳುತ್ತದೆ. ಬಿಜೆಪಿಯವರೇ ಸರ್ಕಾರವನ್ನು ಬೀಳಿಸುತ್ತಾರೆ ಎಂದು ಖರ್ಗೆ ಹೇಳಿದರು.