ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ- ಮುಂಬೈನಲ್ಲಿ ತುರ್ತು ಭೂಸ್ಪರ್ಶ

ಏರ್ ಇಂಡಿಯಾದ ಏರ್‌ಬಸ್ A320neo ವಿಮಾನವು ಟೇಕ್ ಆಫ್ ಆದ ಕೇವಲ 27 ನಿಮಿಷಗಳ ನಂತರ ಮುಂಬೈ ವಿಮಾನ ನಿಲ್ದಾಣಕ್ಕೆ ಮರಳಿದೆ. ಬೆಂಗಳೂರು ಕಡೆಗೆ ತೆರಳುತ್ತಿದ್ದ ವಿಮಾನದ ಎಂಜಿನ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನ ಮತ್ತೆ ಮುಂಬೈಗೆ ತೆರಳಿ ತುರ್ತು ಭೂಸ್ಪರ್ಶ ಮಾಡಿದೆ. ನಂತರ ಬೇರೊಂದು ವಿಮಾನದ ಮೂಲಕ ಪ್ರಯಾಣಿಕರನ್ನು ಕಳುಹಿಸಿಕೊಡಲಾಗಿದೆ.

Tata regains control of troubled Air India with $2.4 bln bid | Reuters


ಬೆಳಗ್ಗೆ 9:43ಕ್ಕೆ ವಿಮಾನವು ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಇಂಜಿನ್ ಗಳಲ್ಲಿ ಹೆಚ್ಚಿನ ಗ್ಯಾಸ್ ನಿಂದಾಗಿ ಉಂಟಾದ ತಾಪಮಾನದ ಬಗ್ಗೆ ಪೈಲಟ್ ಗಳಿಗೆ ಸಂದೇಶ ರವಾನೆಯಾಗಿದೆ. ತದ ನಂತರ ಆ ಇಂಜಿನ್ ಸ್ಥಗಿತಗೊಳಿಸಿದ ಪೈಲಟ್ ಮುಂಬೈ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 10:10ಕ್ಕೆ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ. ಇದನ್ನೂ ಓದಿ :-  ದಕ್ಷಿಣ ಭಾರತದಲ್ಲಿ ಚಿಗುರೊಡೆದ ಬಾಕ್ಸಿಂಗ್ – ಹೆಮ್ಮೆಯ ಸಾಧಕಿ ನಿಖತ್ ಝರೀನ್

Air India reported worst punctuality, most flight delays in March


ಏರ್ ಇಂಡಿಯಾದ ಏರ್‌ಬಸ್ A320neo ವಿಮಾನಗಳು CFM ಇಂಟರ್‌ನ್ಯಾಶನಲ್‌ನ ಲೀಪ್ ಎಂಜಿನ್‌ಗಳನ್ನು ಹೊಂದಿವೆ. ಏವಿಯೇಷನ್ ರೆಗ್ಯುಲೇಟರ್ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ :- ಥಾಮಸ್ ಕಪ್ 2022 – ಇದೇ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!