ಕಿರುತೆರೆ ಅಸಿಸ್ಟೆಂಟ್ ಡೈರೆಕ್ಟರ್ ಒಬ್ಬ ಕಾರಿನಲ್ಲಿ ವೇಗವಾಗಿ ಬಂದು ನಾಲ್ವರು ಪಾದಾಚಾರಿಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ಕತ್ರಿಗುಪ್ಪೆ ಬಳಿ ನಡೆದಿದೆ.
![](https://rajnewskannada.in/wp-content/uploads/2022/05/WhatsApp-Image-2022-05-20-at-12.15.19-PM-1024x461.jpeg)
ಘಟನೆಯಲ್ಲಿ ಒಬ್ಬ ಪಾದಾಚಾರಿ ಸಾವನ್ನಪ್ಪಿದ್ದಾನೆ. ಶೂಟಿಂಗ್ ಮುಗಿಸಿಕೊಂಡು ಬನಶಂಕರಿ ಕಡೆಯಿಂದ ಕಾರಿನಲ್ಲಿ ವೇಗವಾಗಿ ಬಂದ ಕಿರುತೆರೆ ಅಸಿಸ್ಟೆಂಟ್ ಡೈರೆಕ್ಟರ್ ಮುಖೇಶ್ ನಾಲ್ವರು ಪಾದಾಚಾರಿಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಪಾದಾಚಾರಿಗಳು ಮೇಲಕ್ಕೆ ಚಿಮ್ಮಿದ್ದಾರೆ. ಇದನ್ನೂ ಓದಿ :- ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಸಂಕಷ್ಟ – ನಾಲ್ಕು ಆರೋಪಗಳ ತನಿಖೆಗೆ ಸರ್ಕಾರ ಆದೇಶ
![](https://rajnewskannada.in/wp-content/uploads/2022/05/car.png)
ಮಾತ್ರವಲ್ಲದೇ ಸ್ಥಳದಲ್ಲೇ ಇದ್ದ ಇನ್ನೊಂದು ಕಾರು ಹಾಗೂ ಬೈಕಿಗೂ ಡಿಕ್ಕಿಯಾಗಿದೆ. ಇಟ್ಟಮಡು ಬಳಿ ಇಳಿಜಾರು ಇದ್ದ ಕಾರಣ ಕಾರು ವೇಗವಾಗಿ ಬಂದು ಪಾದಾಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಸುರೇಶ್ ಎಂಬಾತ ಮೃತಪಟ್ಟಿದ್ದು ಕಾರು ಚಾಲಕ ಮುಖೇಶ್ ನಿರ್ಲಕ್ಷ್ಯ ಹಾಗೂ ವೇಗದ ಚಾಲನೆಯೇ ಕಾರಣ ಎಂದು ಪಶ್ಚಿಮ ವಿಭಾಗ ಸಂಚಾರಿ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ.
ಇದನ್ನೂ ಓದಿ :- ಮಕ್ಕಳಿಗೆ ಎಡಪಂಥ ಬಲಪಂಥ ಎನ್ನುವುದಕ್ಕಿಂತ ದೇಶ ಮುಖ್ಯ – ಸಿದ್ದರಾಮಯ್ಯ