ಐಶ್ವರ್ಯ ರೈ ಭಾರತೀಯ ಚಿತ್ರರಂಗದ ಅನಭಿಷಿಕ್ತ ರಾಣಿ. ಸೌಂದರ್ಯ ಲೋಕಕ್ಕೆ ಈಕೆಯೇ ಯಜಮಾನಿ. ಐಶ್ವರ್ಯ ಕನ್ನಡತಿ ಆದರೂ ಕೂಡ ಇಲ್ಲಿಯವರೆಗೂ ಒಂದೇ ಒಂದು ಕನ್ನಡ ಸಿನಿಮಾ ಮಾಡಿರ್ಲಿಲ್ಲಾ. ಅದು ಕನ್ನಡ ಸಿನಿ ಅಭಿಮಾನಿಗಳನ್ನ ಕಾಡ್ತಾನೆ ಇತ್ತು. ಆದರೀಗ ಬಚ್ಚನ್ ಸೊಸೆ ಸ್ಯಾಂಡಲ್ವುಡ್ಗೆ ಬರೋದು ಕೊನೆಗೂ ಖಚಿತವಾಗಿದೆ.
ಅಂದಹಾಗೆ ಐಶ್ವರ್ಯ ಕೊನೆದಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದು ೨೦೧೮ರಲ್ಲಿ ರಿಲೀಸ್ ಆದ ಫನ್ನಿಖಾನ್ ಚಿತ್ರದಲ್ಲಿ ಅದಾದ ಬಳಿಕ ಸಿನಿಮಾಗಳಿಂದ ದೂರ ಉಳಿದಿರೋ ಐಶ್, ಸದ್ಯ ಮಣಿರತ್ನಂ ನಿರ್ದೇಶನದ ಪೊನ್ನಿಯಿ ಸೆಲ್ವಂ ಚಿತ್ರದಲ್ಲಿ ನಟಿಸ್ತಿದ್ದಾರೆ. ಈ ಚಿತ್ರ ಆದ್ಮೇಲೆ ನೆಕ್ಟ್ ಪ್ರಾಜೆಕ್ಟ್ ಯಾವುದು ಅನ್ನೋವಾಗ ಸಿಕ್ಕ ಉತ್ತರವೇ ಆರ್ ಬಾಲ್ಕಿ ಚಿತ್ರ..
ಬಾಲಿವುಡ್ನ ಸ್ಟಾರ್ ಡೈರೆಕ್ಟರ್ ಆರ್. ಬಾಲ್ಕಿ ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರದಲ್ಲಿ ಐಶ್ವರ್ಯ ರೈ ನಟಿಸುತ್ತಿದ್ದಾರೆ. ಭಿನ್ನ ಕಥೆ ಹೊಂದಿರುವ ಈ ಚಿತ್ರದಲ್ಲಿ ಐಶ್ವರ್ಯ ರೈಗೆ ವಿಶೇಷ ಪಾತ್ರವಿದೆಯಂತೆ. ಅಂದಹಾಗೆ ಈ ಚಿತ್ರವನ್ನ ಪ್ಯಾನ್ ಇಂಡಿಯಾ ಚಿತ್ರ ಮಾಡೋ ಯೋಜನೆ ಚಿತ್ರತಂಡದ್ದು.. ಹಾಗಾಗಿ ಕನ್ನಡ ಸೇರಿದಂತೆ ದಕ್ಷಿಣದ ಅಷ್ಟೂ ಭಾಷೆಗಳಲ್ಲಿ ಐಶ್ ಸಿನಿಮಾ ಬರಲಿದೆ. ವಿಶೇಷ ಅಂದ್ರೆ ಐಶ್ ನಟನೆಯ ಈ ಚಿತ್ರ ಹಂಪಿಯಲ್ಲಿ ಶೂಟ್ ಆಗಲಿದೆಯಂತೆ. ಈಗಾಗ್ಲೇ ಚಿತ್ರತಂಡದಿಂದ ಲೊಕೇಷನ್ ಹಂಟಿಂಗ್ ನಡೆದೆಯಂತೆ.
ಡೈರೆಕ್ಟ್ ಕನ್ನಡ ಸಿನಿಮಾದಲ್ಲಿ ಐಶ್ ನಟಿಸ್ತಾರೆ ಅನ್ನೋದು ಸದ್ಯ ಕನಸಿನ ಮಾತು ಅದು. ಯಾಕಂದ್ರೆ ಐಶ್, ಬಾಲಿವುಡ್ ಚಿತ್ರಗಳನ್ನೇ ಮಾಡೊದನ್ನ ಕಡಿಮೆ ಮಾಡಿದ್ದಾರೆ. ಮಗಳ ಕಂಪನಿಯನ್ ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಿದ್ದಾರೆ. ಅಲ್ಲದೆ ಐಶ್ ಸಂಭಾವನೆ ಕಡಿಮೆ ಅಂದ್ರೂ ಕೋಟಿಗಳ ಲೆಕ್ಕದಲ್ಲಿ ದಶಕೋಟಿ ದಾಟಿದೆ.. ಒಟ್ನಲ್ಲಿ ಹೇಗಾದ್ರು ಆಗ್ಲಿ ಐಶ್ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾರೆ ಅನ್ನೋದೆ ಖುಷಿಯ ವಿಚಾರ.