ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೋವಿಡ್ ವಿರುದ್ಧದ ಹೋರಡಲು ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಫೌಂಡೇಷನ್ ಗೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ಗಂಭೀರ್ ಫೌಂಡೇಷನ್ ಗೆ 1 ಕೋಟಿ ರೂ. ನೆರವು ನೀಡಿದ ಅಕ್ಷಯ್, ಶೀಘ್ರದಲ್ಲೇ ಈ ಕೆಟ್ಟ ಪರಿಸ್ಥಿತಿಯಿಂದ ಹೊರಬರುವ ವಿಶ್ವಾಸವಿದೆ ಎಂದು ಶುಭ ಹಾರೈಸಿದ್ದಾರೆ.
ಇದೇ ವೇಳೆ ಅಕ್ಷಯ್ ಕುಮಾರ್ ನೆರವಿಗೆ ಗಂಭೀರ್ ಧನ್ಯವಾದ ಅರ್ಪಿಸಿದ್ದು, ಪ್ರತಿಯೊಂದು ನೆರವು ಕೂಡ ಭರವಸೆಯ ಬೆಳಕಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.